ಸುದ್ದಿ ಸಂಕ್ಷಿಪ್ತ

ಅ.24 ರಂದು ಮೈಸೂರು ಚಲೋ ಚಳುವಳಿ ಆಚರಣೆ

ಮೈಸೂರು ಚಲೋ ಚಳುವಳಿಯ  ನೆನೆಪಿಗಾಗಿ ಅ.24ರಂದು ಸಾಂಕೇತಿಕವಾಗಿ, ನ.16 ರಂದು ಪೂರ್ಣ ಪ್ರಮಾಣದಲ್ಲಿ ‘ಮೈಸೂರು ಚಲೋ ಚಳುವಳಿ’ ಆಚರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆ ಹಾಗೂ ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಸಹಯೋಗದೊಂದಿಗೆ ಮೈಸೂರು ಚಲೋ ಚಳುವಳಿ ಕಾರ್ಯಕ್ರಮ ಆಚರಿಸಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ರಾಷ್ಟ್ರ ಧ್ವಜಾರೋಹಣ ಮಾಡಿ, ಗಾಂಧಿ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ. 13 ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರನ್ನು ಆಹ್ವಾನಿಸಲಾಗುತ್ತದೆಂದು ಸಂಘದ ಅಧ್ಯಕ್ಷ ಡಾ.ಎಂ.ಜಿ.ಕೃಷ್ಣಮೂರ್ತಿ ಸಭೆಯಲ್ಲಿ ತಿಳಿಸಿದರು.

ಮೆರವಣಿಗೆಯು ಸುಬ್ಬರಾಯನ ಕೆರೆಯಿಂದ ಹೊರಡಲಿದ್ದು, ಬಳಿಕ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರಿಂದ ಉಪನ್ಯಾಸ, ಕಲಾವಿದರಿಂದ ನೃತ್ಯರೂಪಕ ನಡೆಯಲಿದೆ ಎಂದು ಹೇಳಿದರು.

ಈ ಸಭೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಮೈ.ಸಿ.ರೇವಣ್ಣ, ಕಾರ್ಯಕಾರಿ ಸದಸ್ಯರಾದ ಟಿ.ವೆಂಕಟಾಚಲಯ್ಯ, ಡಾ.ಸೋಮಶೇಖರ್, ಬಿ.ಕರುಣಾಕರ್ ಉಪಸ್ಥಿತರಿದ್ದರು.

Leave a Reply

comments

Related Articles

error: