ಮೈಸೂರು

ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ : ಕೇಂದ್ರ ಸಚಿವ ತಾವರ್ ಚಂದ್ ಗೆಹ್ಲೋಟ್

(ಸಂಸತ್ತಿನ) ಕೇಂದ್ರಿಯ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಮಂತ್ರಾಲಯದ ಸಲಹಾ ಕಮಿಟಿಯ ನಾಲ್ಕನೇ ವಿಶೇಷ ಸಭೆಯು ನಗರದ ಲಲಿತ್ ಮಹಲ್ ಹೋಟೆಲ್ ನಲ್ಲಿ ಅ.17ರಂದು ಜರುಗಿತು.

ಸಭೆಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಮತ್ತು ಆಭಿವೃದ್ಧಿ ನಿಗಮ (NSFDC)ದ ಪ್ರಗತಿ ಕಾರ್ಯಗಳ ಬಗ್ಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಕೇಂದ್ರ ಸಚಿವ ತಾವರ್ ಚಂದ್ ಗೆಹ್ಲೋಟ್ ನೇತೃತ್ವದಲ್ಲಿ ಸಭೆ ನಡೆದಿದ್ದು, ನಿಗಮದಿಂದ ಕೈಗೊಂಡಿರುವ ಹಲವಾರು ಅಭಿವೃದ್ಧಿ ಯೋಜನೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎನ್.ಎಸ್.ಎಫ್.ಡಿ.ಸಿ. ಅಡಿಯಲ್ಲಿ ಒಟ್ಟು 11 ಯೋಜನೆಗಳನ್ನು ಮತ್ತು ಮುಖ್ಯ ಯೋಜನೆಯನ್ನು ಜಾರಿಗೊಳಿಸಲಾಗಿದ್ದು ಪರಿಶಿಷ್ಟರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು 50 ಸಾವಿರದಿಂದ 3 ಲಕ್ಷ ರೂಪಾಯಿಗಳವರೆಗೆ ಸಾಲದ ರೂಪದಲ್ಲಿ ಹಣಕಾಸು ನೆರವು ನೀಡಲಾಗುವುದು. ಎನ್.ಎಸ್.ಎಫ್.ಡಿ.ಸಿ. ವತಿಯಿಂದ ಕೌಶಲ್ ತರಬೇತಿಯನ್ನು ನೀಡಲಾಗುವುದು ಈ ಸಂದರ್ಭದಲ್ಲಿ 1500 ರೂ.ಗಳ ಶಿಷ್ಯವೇತನ ನೀಡಲಾಗುವುದು ಎಂದು ತಿಳಿಸಿದರು.

‘ಹಸಿರು ಉದ್ಯೋಗ’ ಉತ್ತೇಜಿಸಿ ಆದಾಯವನ್ನು ವೃದ್ಧಿಸಲು ನಿರ್ದಿಷ್ಟ ಗುಂಪುಗಳನ್ನು ಯೋಜನೆಯಡಿ ಆಯ್ಕೆ ಮಾಡಲಾಗಿದ್ದು ಹವಾಮಾನ ವೈಪರೀತ್ಯ ನಿಭಾಯಿಸಲು ನಿಧಿಯನ್ನು ಬಳಸಲಿದ್ದು ಕೇಂದ್ರ ಸರ್ಕಾರದ ಆದಾಯ ವೃದ್ಧಿಸಲು ನೆರವಾಗುವುದು ಎಂದು ತಿಳಿಸಿದರು.

ನಂತರ ಸದಸ್ಯರೊಂದಿಗೆ ಮುಕ್ತ ಚರ್ಚೆ ನಡೆಸಿ ಎನ್.ಎಸ್.ಎಫ್.ಡಿ.ಸಿ.ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸೂಚಿಸಿದರು. ಸಭೆಯಲ್ಲಿ ನಡೆದ ಚರ್ಚೆ ಹಾಗೂ ನಿರ್ಣಯದ ಬಗ್ಗೆ ಕೇಂದ್ರ ಸದಸ್ಯರಲ್ಲಿ ಮಂಡಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಕೇಂದ್ರದ ರಾಜ್ಯ ಸಚಿವ ಕೃಷ್ಣನ್ ಪಾಲ್ ಗುರ್ಜರ್, ಸಮಾಜ ಕಲ್ಯಾಣ ಸಚಿವ ಎಚ್.ಅಂಜನೇಯ, ಸಂಸದ ಪ್ರತಾಪ್ ಸಿಂಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: