ಸುದ್ದಿ ಸಂಕ್ಷಿಪ್ತ

‘ನಮ್ಮ ಸಾಧಕರು’ –ಸನ್ಮಾನ ಕಾರ್ಯಕ್ರಮ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಅ.20 ರ ಸಂಜೆ 6.30 ಕ್ಕೆ ಬಿಡಾರಂ ಕೃಷ್ಣಪ್ಪ ಅವರ ಪ್ರಸನ್ನ ಸೀತಾರಾಮ ಮಂದಿರದಲ್ಲಿ ‘ನಮ್ಮ ಸಾಧಕರು’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸಂಗಿತ ನೃತ್ಯ ಅಕಾಡೆಮಿ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಗೀತ ಕ್ಷೇತ್ರದ ಸಾಧಕ ವಿದ್ವಾನ್ ಟಿ.ಪಿ.ವೈದ್ಯನಾಥನ್, ಗಮಕದ ವಿಲಾಸಕುಮಾರಿ ಶರ್ಮ, ನೃತ್ಯದಲ್ಲಿ ಲಲಿತಾ ರಾವ್, ಸುಗಮ ಸಂಗೀತದಲ್ಲಿ ಎಸ್, ಶಾರದಮ್ಮ, ಹರಿಕಥೆಯಲ್ಲಿ ವಾಣಿ ದ್ವಾರಕನಾಥ್ ಅವರನ್ನು ಸನ್ಮಾನಿಸಲಾಗುವುದು.

ಬಳಿಕ ವಿದುಷಿ ಗೀತಾ ಪುಟ್ಟಿ ಮತ್ತು ವಾರುಣಿ ಪಿ. ರಾವ್ ಅವರಿಂದ ದ್ವಂದ್ವ ಗಾಯನ, ನಿತ್ಯಶ್ರೀ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

 

Leave a Reply

comments

Related Articles

error: