ಕರ್ನಾಟಕ

ನಾಯಕತ್ವ ಹಾಗೂ ಸಮುದಾಯ ಅಭಿವೃದ್ದಿ : ಉಡುಪಿಯಲ್ಲಿ ವಸತಿಯುತ ತರಬೇತಿ ಶಿಬಿರ

ಉಡುಪಿ, ಜುಲೈ 21 : ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ, ಉಡುಪಿ ಇವರು ಉಡುಪಿ ಜಿಲ್ಲೆಯ 3 ತಾಲೂಕುಗಳಲ್ಲಿ ನಾಯಕತ್ವ ಹಾಗೂ ಸಮುದಾಯ ಅಭಿವೃದ್ದಿ ತರಬೇತಿಯನ್ನು ಹಮ್ಮಿಕೊಳ್ಳಲಿದೆ.

ಕಾರ್ಯಕ್ರಮವು 5 ದಿನಗಳ ಕಾಲ ನಡೆಯಲಿದ್ದು, ಶಿಬಿರಾರ್ಥಿಗಳು ಕಾರ್ಯಕ್ರಮದಡಿ ವಾಸ್ತವ್ಯ ಮಾಡಬೇಕಾಗಿರುತ್ತದೆ. ಶಿಬಿರಾರ್ಥಿಗಳ ಊಟ, ಉಪಹಾರ ಮತ್ತು ವಸತಿ ವ್ಯವಸ್ಥೆಯನ್ನು ನೆಹರು ಯುವ ಕೇಂದ್ರವು ಭರಿಸುತ್ತದೆ. ಕಾರ್ಯಕ್ರಮದಡಿ ನಾಯಕತ್ವ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ ಕಾರ್ಯಕ್ರಮ ನಿರ್ವಹಣೆ, ಕೇಂದ್ರ ಸರಕಾರದ ಯೋಜನೆಗಳು, ಜೀವನ ಕೌಶಲ್ಯ ತರಬೇತಿ ಹೀಗೆ ಹಲವು ವಿಷಯಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಇರುತ್ತದೆ.

ಉಡುಪಿ ಜಿಲ್ಲೆಯ ಆಸಕ್ತ ಯುವಕ, ಯುವತಿ ಮಂಡಳದ 18ರಿಂದ 29 ವರ್ಷದೊಳಗಿನ ಸದಸ್ಯರು ತಮ್ಮ ಹೆಸರನ್ನು ನೆಹರು ಯುವ ಕೇಂದ್ರ, ರಜತಾದ್ರಿ, ಜಿಲ್ಲಾಧಿಕಾರಿ ಕಛೇರಿ ಆವರಣ, ಮಣಿಪಾಲ, ಉಡುಪಿ ಇಲ್ಲಿ ಆಗಸ್ಟ್ 9 ರ ಒಳಗೆ ನೊಂದಾಯಿಸಬೇಕು ದೂರವಾಣಿ ಸಂಖ್ಯೆ: 0820-2574992 ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಬಹುದು ನೆಹರು ಯುವ ಕೇಂದ್ರದ ಪ್ರಕಟಣೆ ತಿಳಿಸಿದೆ.

-ಎನ್.ಬಿ.

Leave a Reply

comments

Related Articles

error: