ಸುದ್ದಿ ಸಂಕ್ಷಿಪ್ತ

ದಸರಾದಲ್ಲೂ ರಾಜಕೀಯ ಬೆರೆಯುತ್ತಿರುವುದು ವಿಷಾದನೀಯ : ಪಿ.ಎಂ.ರವಿ

ಮಡಿಕೇರಿ ಜು.23 : ಮಾತು ಮನೆ ಕೆಡೆಸಿತು ತೂತು ಒಲೆ ಕೆಡಿಸಿತು ಎಂಬ ಗಾದೆ ಮಾತಿನಂತೆ ದಸರಾ ಬೈಲಾ ತಿದ್ದುಪಡಿ ಸಭೆ ಕೇವಲ ಆರೋಪ ಪ್ರತ್ಯಾರೋಪದಿಂದ ಮೊಟಕು ಗೊಂಡಿರುವುದು ವಿಷಾದನೀಯವೆಂದು ತಿಳಿಸಿರುವ ತುಳುವೆರ ಜನಪದ ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ದಸರಾ ಸಮಿತಿಯ ಮಾಜಿ ಉಪಾಧ್ಯಕ್ಷರಾದ ಪಿ.ಎಂ.ರವಿ, ನಾಡಹಬ್ಬ ದಸರಾದಲ್ಲೂ ರಾಜಕೀಯ ಬೆರೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲವೆಂದು ಹೇಳಿದ್ದಾರೆ.  ನಾಡಹಬ್ಬ ದಸರಾ ಎಲ್ಲರೂ ಒಗ್ಗೂಡಿ ಆಚರಿಸಬೇಕಾದ ಹಬ್ಬವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ವಾದ, ಪ್ರತಿವಾದ, ವಿವಾದಗಳನ್ನು ಸೃಷ್ಟಿಸುತ್ತಿರುವುದು ಬೇಸರದ ವಿಚಾರವಾಗಿದೆ. ದಸರಾ ಸಭೆಯಲ್ಲಿ ಗುಂಪುಗಾರಿಕೆ ಮತ್ತು ರಾಜಕೀಯ ಪ್ರವೇಶವಾಗಿರುವುದು ಸ್ಪಷ್ಟವಾಗುತ್ತಿದೆ. ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಗದ್ದಲ ಗಲಾಟೆಯಿಂದ ಮಡಿಕೇರಿ ಜನತೆ ತಲೆ ತಗ್ಗಿಸುವಂತ್ತಾಗಿದ್ದು, ಇದೀಗ ದಸರಾ ಸಭೆಯಲ್ಲೂ ಇದೇ ಬೆಳವಣಿಗೆ ಕಂಡು ಬರುತ್ತಿರುವುದು ಅಪಮಾನಕಾರಿ ಎಂದು ಪಿ.ಎಂ.ರವಿ ಟೀಕಿಸಿದ್ದಾರೆ. ನಾಡಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಮನೋಸ್ಥಿತಿಗಳು ಕಾರ್ಯಪ್ರವೃತ್ತವಾಗಬೇಕೆ ಹೊರತು ಸ್ವಪ್ರತಿಷ್ಠೆಗಾಗಿ ದಸರಾವನ್ನು ಬಳಸಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: