ಕರ್ನಾಟಕಪ್ರಮುಖ ಸುದ್ದಿ

ಟ್ರ್ಯಾಕ್ಟರ್ ನ ರೋಟರಿ ಕಲ್ಟಿವೇಟರ್ ಗೆ ಸಿಲುಕಿ‌ ಕೃಷಿ ಕಾರ್ಮಿಕ ಸಾವು

ರಾಜ್ಯ(ಮಂಡ್ಯ)ಜು.23:-  ಟ್ರ್ಯಾಕ್ಟರ್ ನ ರೋಟರಿ ಕಲ್ಟಿವೇಟರ್ ಗೆ ಸಿಲುಕಿ‌ ಕೃಷಿ ಕಾರ್ಮಿಕರೋರ್ವರು  ಸಾವನ್ನಪ್ಪಿದ ಘಟನೆ ನಾಗಮಂಗಲ ತಾಲೂಕಿನ ಗಿಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಗಿಡುವಿನಹಳ್ಳಿ ಗ್ರಾಮದ ಲಕ್ಕೇಗೌಡ(22) ಎಂದು ಗುರುತಿಸಲಾಗಿದೆ.ರಾತ್ರಿ ಜಮೀನಿನಲ್ಲಿ ಟ್ರ್ಯಾಕ್ಟರ್ ಮೂಲಕ  ಸತ್ತೆ ತೆಗೆಯುತ್ತಿದ್ದಾಗ ದುರ್ಘಟನೆ ನಡೆದಿದೆ. ಸ್ಥಳಕ್ಕೆ ನಾಗಮಂಗಲ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: