ಕರ್ನಾಟಕಪ್ರಮುಖ ಸುದ್ದಿ

ತಹಶೀಲ್ದಾರ್ ಶಂಕರಯ್ಯ ಆತ್ಮಹತ್ಯೆಯ ಹಿಂದೆ ಮರಳು ಮಾಫಿಯಾ ಕೈವಾಡ : ಶೋಭಾ ಕರಂದ್ಲಾಜೆ ಆರೋಪ

ರಾಜ್ಯ(ಮಂಡ್ಯ)ಜು.23:- ಮೃತ ತಹಶೀಲ್ದಾರ್ ಶಂಕರಯ್ಯ ಆತ್ಮಹತ್ಯೆಯ ಹಿಂದೆ ಮರಳು ಮಾಫಿಯಾ ಅಥವಾ ಲ್ಯಾಂಡ್ ಮಾಫಿಯಾದ ಕೈವಾಡವಿದೆ ಎಂದು ಸಂಸದೆ  ಶೋಭಾ ಕರಂದ್ಲಾಜೆ ಗಂಭೀರವಾಗಿ  ಆರೋಪಿಸಿದ್ದಾರೆ.

ಮಂಡ್ಯದ ಶಂಕರಯ್ಯ ನಿವಾಸಕ್ಕೆ ಭೇಟಿ ಸಂಸದೆ ಶೋಭಾ ಕರಂದ್ಲಾಜೆ ಕುಟುಂಬಿಕರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಸಿದ್ದರಾಮಯ್ಯನ ಕಾಂಗ್ರೆಸ್ ಸರ್ಕಾರ ಬಂದ ನಂತರ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಸಿಟಿಂಗ್ ಜಡ್ಜ್ ಮೂಲಕ ಪ್ರಕರಣದ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ  ಆಗ್ರಹಿಸಿದರು. ಮೃತ ತಹಶೀಲ್ದಾರ್ ಶಂಕರಯ್ಯ ಡೆತ್ನೋಟ್ ಬರೆದಿದ್ದನ್ನು ಬಹಿರಂಗಪಡಿಸದೆ ಮುಚ್ಚಿಟ್ಟರುವ ಕ್ರಮದ ಕುರಿತು  ಆಕ್ಷೇಪ ವ್ಯಕ್ತಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: