ಮೈಸೂರು

ಎಲ್.ಪಿ.ಜಿ ಆಧಾರ್ ಲಿಂಕ್ : ಅ.30 ಕೊನೆಯ ದಿನ

ಅಡುಗೆ ಅನಿಲ ಎಲ್.ಪಿ.ಜಿಗಾಗಿ ಸಾರ್ವಜನಿಕರು ಆಧಾರ್ ಲಿಂಕ್ ನೀಡಲು ಅ.30ರವರೆಗೆ ಸಮಯ ನಿಗದಿ ಪಡಿಸಲಾಗಿದ್ದು ಇಲ್ಲಿಯವರೆಗೂ ಮಾಡದೆ ಇದ್ದವರು ಲಿಂಕ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು ಮುಂದೆ ಸಮಯ ವಿಸ್ತರಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರವು ಖಚಿತಪಡಿಸಿದೆ.

ಗೃಹಬಳಕೆ ಅಡುಗೆ ಅನಿಲ ಬಳಕೆದಾರರು ಆಧಾರ್ ಕಾರ್ಡ್ ಮಾಹಿತಿ ನೀಡುವುದು ಕಡ್ಡಾಯ. ಇಲ್ಲದಿದ್ದರೆ ಕೇಂದ್ರ ಸರ್ಕಾರ ಅನಿಲಕ್ಕೆ ನೀಡುವ ಸಬ್ಸಿಡಿಗೆ ನವೆಂಬರ್ ನಂತರ ಕತ್ತರಿ ಬೀಳಲಿದೆ. ಪ್ರಸ್ತುತ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸೂಚನೆಯ ಮೇರೆಗೆ ಸಬ್ಸಿಡಿ ರಹಿತ ಸಿಲಿಂಡರ್ ಖರೀದಿ ಮಾಡಿ ನಂತರ ಸಬ್ಸಿಡಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾವಣೆ ಮಾಡಲಾಗುತ್ತಿದ್ದು. ಸಬ್ಸಿಡಿ ಎಲ್ ಪಿ ಜಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು, ಇಲ್ಲವಾದಲ್ಲಿ ಸಂರ್ಪೂಣ ಹಣ ನೀಡಿಯೇ ಸಿಲಿಂಡರ್ ಖರೀದಿಸಬೇಕಾಗುವುದು ಎಚ್ಚರ.

Leave a Reply

comments

Related Articles

error: