ದೇಶ

ಭುವನೇಶ್ವರದ ಎಸ್‍ಯುಎಮ್ ಆಸ್ಪತ್ರೆಯಲ್ಲಿ ಬೆಂಕಿ: 19 ಮಂದಿ ಸಾವು

ಭುವನೇಶ್ವರ ಹೊರವಲಯದಲ್ಲಿರುವ ಎಸ್‍ಯುಎಮ್ ಆಸ್ಪತ್ರೆ (ಮೆಡಿಕಲ್ ಕಾಲೇಜು)ಯ ಐಸಿಯು ಮತ್ತು ಡಯಾಲಿಸಿಸ್ ವಾರ್ಡ್‍ನಲ್ಲಿ ಭಾರಿ ಬೆಂಕಿ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ 19 ಮಂದಿ ರೋಗಿಗಳು ಉಸಿರುಗಟ್ಟಿ ಸಾವನ್ನಪ್ಪಿರುವುದು ವರದಿಯಾಗಿದೆ.

ಈ ದುರ್ಘಟನೆಯಲ್ಲಿ 22 ಮಂದಿ ಮೃತಪಟ್ಟಿದ್ದಾರೆ ಎಂದು ಆರಂಭಿಕ ವರದಿ ತಿಳಿಸಿತ್ತು. ಬೆಂಕಿ ಅವಘಡದಲ್ಲಿ 19 ಮಂದಿ ಮೃತಪಟ್ಟಿದ್ದಾರೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಆದಿತ್ಯ ಪಧಿ ಸ್ಪಷ್ಟನೆ ನೀಡಿದ್ದಾರೆ. 100ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು, ನಗರದ ವಿವಿಧ ಆಸ್ಪತ್ರೆಗಳಲ್ಲಿ ಅವರನ್ನು ದಾಖಲಿಸಲಾಗಿದೆ.

ಶಾರ್ಟ್‍ ಸರ್ಕ್ಯೂಟ್‍ನಿಂದಾಗಿ ಮೊದಲನೇ ಮಹಡಿಯಲ್ಲಿರುವ ಡಯಾಲಿಸಿಸ್ ಓಟಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಸಂಜೆ 7 ಗಂಟೆಯಷ್ಟು ಹೊತ್ತಿಗೆ ಐಸಿಯು ಮತ್ತು ಇತರ ವಾರ್ಡ್‍ಗಳಿಗೂ ಈ ಬೆಂಕಿ ಹಬ್ಬಿದೆ. ಆಸ್ಪತ್ರೆಯಾದ್ಯಂತ ಹಬ್ಬದ್ದ ಬೆಂಕಿ ಜ್ವಾಲೆಯನ್ನು ಸಂಪೂರ್ಣವಾಗಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ 2 ಗಂಟೆ ಶ್ರಮಪಡಬೇಕಾಯಿತು. ಬ್ರೋಂಟೋ ಸ್ಕೈಲಿಫ್ಟ್‍ ಸಹಾಯದಿಂದ ಆಸ್ಪತ್ರೆಯೊಳಗೆ ಸಿಲುಕಿದ್ದ ರೋಗಿಗಳನ್ನು ಹೊರಕ್ಕೆತ್ತಲಾಯಿತು. 15 ಆ್ಯಂಬುಲೆನ್ಸ್ ಗಳ ಮೂಲಕ ರೋಗಿಗಳನನ್ನು ನಗರದ ಇತರ ಆಸ್ಪತ್ರೆಗೆ ರವಾನಿಸಲಾಯಿತು.

ರೋಗಿಗಳು ದಾಖಲಾಗಿದ್ದ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಅವರು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದಾರೆ. ಅಲ್ಲದೆ, ಘಟನೆ ಬಗ್ಗೆ ತನಿಖೆ ನಡೆಸುವಂತೆ ವಿಭಾಗೀಯ ಆಯುಕ್ತರಿಗೆ ಆದೇಶಿಸಿದ್ದಾರೆ.

bhubaneswar-fire-new-photo-759-web

 

Leave a Reply

comments

Related Articles

error: