ಮೈಸೂರು

ಶಂಕಿತ ಡೆಂಗ್ಯೂಗೆ ಮತ್ತೊಂದು ಬಲಿ

ನಂಜನಗೂಡು,ಜು.24-ಶಂಕಿತ ಡೆಂಗ್ಯೂ ಜ್ವರಕ್ಕೆ ನಂಜನಗೂಡಿನಲ್ಲಿ ಗೃಹಿಣಿಯೊಬ್ಬರು ಸಾವನ್ನಪ್ಪಿದ್ದಾರೆ.

ಶಫೀಜ್ ಅಹಮದ್ ಪತ್ನಿ ನಫೀಜಾ ಫಾತೀಮಾ (೪೪) ಜ್ವರಕ್ಕೆ ಮೃತಪಟ್ಟವರು. ಮೈಸೂರಿನ ನಂಜನಗೂಡು ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಫಾತೀಮಾ ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಅವರನ್ನು ಉದಯಗಿರಿಯ ಅಲ್ ಆನ್ಸರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫಾತೀಮಾ ಸಾವನ್ನಪ್ಪಿದ್ದಾರೆ. (ವರದಿ-ಎಸ್.ಎನ್, ಆರ್.ವಿ, ಎಂ.ಎನ್)

Leave a Reply

comments

Related Articles

error: