ಸುದ್ದಿ ಸಂಕ್ಷಿಪ್ತ

ರಂಗ ವಿಮರ್ಶೆ ಅಂದು-ಇಂದು : ವಿಚಾರ ಸಂಕಿರಣ

ದೇಶಿರಂಗ ಸಾಂಸ್ಕೃತಿಕ ಸಂಸ್ಥೆಯು ಶ್ರೀ ರಾಜರಾಜೇಶ್ವರಿ ವಸ್ತ್ರಾಲಂಕಾರ ರಂಗ ತಂಡದ ಸಹಯೋಗದಲ್ಲಿ ಅ,23 ರ ಬೆ.10.30 ಕ್ಕೆ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ‘ರಂಗ ವಿಮರ್ಶೆ ಅಂದು-ಇಂದು’ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ.

ಹಿರಿಯ ರಂಗಕರ್ಮಿ ಡಾ.ನ.ರತ್ನ ಕಾರ್ಯಕ್ರಮವನ್ನು ಉದ್ಘಾಟಿಸುವರು. ರಂಗ ಚಿಂತಕ ಡಾ.ಎಚ್.ಕೆ. ರಾಮನಾಥ್ ಅಧ‍್ಯಕ್ಷತೆ ವಹಿಸಲಿದ್ದಾರೆ. ಹಿರಿಯ ರಂಗಕರ್ಮಿ ಪ್ರೊ.ಎಚ್.ಎಸ್. ಉಮೇಶ್ ಅವರು ‘ರಂಗ ವಿಮರ್ಶೆ ಬೆಳೆದು ಬಂದ ದಾಋಇ’ ಕುರಿತು, ಶ್ರೀಕಂಠ ಗುಂಡಪ್ಪ ಅವರು ‘ನಾಟಕ ನೋಡುವ ಬಗೆ’ ಕುರಿತು ಮತ್ತು ಪ್ರೊ.ಸಿ.ವಿ. ಶ್ರೀಧರಮೂರ್ತಿ ಅವರು ‘ನಾಟಕ ಕೃತಿ ಮತ್ತು ರಂಗ ಪ್ರಯೋಗದ ವಿಮರ್ಶಾ ಕ್ರಮ’ ಕುರಿತು ಪ್ರಬಂಧ ಮಂಡಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ರಂಗ ಚಿಂತಕ ಗಂಗಾಧರಸ್ವಾಮಿ, ಮಂಡ್ಯ ರಮೇಶ್, ರಾಜಶೇಖರ ಕದಂಬ, ನಾ. ನಾಗಚಂದ್ರ, ಪ್ರಕಾಶ್ ಶೆಣೈ, ಪ್ರೊ. ಭದ್ರಪ್ಪ ಹೆನ್ಲಿ, ಹರೀಶ್, ಹೊರೆಯಾಲ ದೊರೆಸ್ವಾಮಿ, ಡಾ.ಪೂರ್ಣಿಮಾ, ಮಾಧವ ಖರೆ, ಮತ್ತಿತರರು ಭಾಗವಹಿಸುತ್ತಾರೆ.

Leave a Reply

comments

Related Articles

error: