ಮೈಸೂರು

ಅ.23: “ರಂಗ ವಿಮರ್ಶೆ-ಅಂದು ಇಂದು” ವಿಚಾರಸಂಕಿರಣ-ಸಂವಾದ

ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯು ಶ್ರೀ ರಾಜರಾಜೆಶ್ವರಿ ವಸ್ತ್ರಾಲಂಕಾರ ರಂಗತಂಡದ ಸಹಯೋದಲ್ಲಿ “ರಂಗ ವಿಮರ್ಶೆ – ಅಂದು ಇಂದು” ವಿಷಯದ ಕುರಿತು ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಅ.23 ಭಾನುವಾರ ಬೆಳಗ್ಗೆ 10.30ಕ್ಕೆ ರಂಗಾಯಣದ ಶ್ರೀ ರಂಗವೇದಿಕೆಯಲ್ಲಿ ಆರಂಭವಾಗುವ ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿ ಡಾ|| ನ. ರತ್ನ ನೆರವೇರಿಸಲಿದ್ದಾರೆ. ಹಿರಿಯ ರಂಕಚಿಂತಕ ಡಾ|| ಎಚ್.ಕೆ. ರಾಮನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.

“ರಂಗ ವಿಮರ್ಶೆ ಬೆಳೆದು ಬಂದ ದಾರಿ” ವಿಷಯದ ಕುರಿತು ಪ್ರೊ. ಎಚ್.ಎಸ್. ಉಮೇಶ್; “ನಾಟಕವನ್ನು ನೋಡುವ ಬಗೆ” ವಿಷಯದ ಕುರಿತು ಶ್ರೀ ಶ್ರೀಕಂಠಗುಂಡಪ್ಪ; “ನಾಟಕ ಕೃತಿ ಮತ್ತು ರಂಗ ಪ್ರಯೋಗ ವಿಮರ್ಶಾ ಕ್ರಮ” ವಿಷಯದ ಕುರಿತು ಪ್ರೊ. ಸಿ.ವಿ. ಶ್ರೀಧರಮೂರ್ತಿ ಅವರು ಮಾತನಾಡಲಿದ್ದಾರೆ.

ಸಂವಾದದಲ್ಲಿ ರಂಗ ಚಿಂತಕರಾದ ಗಂಗಾಧಸ್ವಾಮಿ, ಮಂಡ್ಯ ರಮೇಶ್, ರಾಜಶೇಖರ ಕದಂಬ, ನಾ. ನಾಗಚಂದ್ರ, ಪ್ರಕಾಶ್ ಶೆಣೈ, ಪ್ರೊ. ಭದ್ರಪ್ಪ ಹೆಗ್ಲಿ, ಹರೀಶ್, ಹೊರೆಯಾಲ ದೊರೆಸ್ವಾಮಿ, ಡಾ|| ಪೂರ್ಣಿಮ, ಮಾಧವ ಖರೆ, ಶಿವಾಜಿರಾವ್ ಜಾದವ್, ದಿನಮಣಿ ಬಿ.ಎಸ್, ರವೀಶ್, ಶಶಿಧರ ಡೋಗ್ರೆ, ಮಂಜುನಾಥ ಬೆಳಕೆರೆ, ಜಯರಾಮ್ ತಾತಾಚಾರ್, ಡಿ. ನಾಗೇಂದ್ರಕುಮಾರ್, ನಾರಾಯಣ ಶೆಟ್ಟಿ, ಉದಯಕುಮಾರ್, ಹರಿಪ್ರಸಾದ್, ಮೀನಾ ಮೈಸೂರು, ಮಂಜು ಆರ್. ಉಪಾಧ್ಯಾಯ, ಗೀತಾ ಮೋಟಡ್ಕ, ಯು.ಎಸ್. ರಾಮಣ್ಣ, ನಂದಾ ಹಳೇಮನೆ, ಸುಬ್ಬು ನರಸಿಂಹ, ಅಶ್ವತ್ಥ್ ಕದಂಬ, ಕೆ.ಎನ್. ಕೃಷ್ಣಪ್ರಸಾದ್, ಶ್ರೀಧರ್, ಯೋಗಾನಂದ್, ನಾಗಭೂಷಣ್, ರಾಮನಾಥ್, ಧನಂಜಯ, ಕು|| ನಾಗರತ್ನ, ಡಾ|| ಗೀತಾಂಜಲಿ, ರಮೇಶ್ ಬಾಬು, ರಂಗಸ್ವಾಮಿ, ಮೋಹನ್ ರಾಜ್, ರಾಜೇಶ್ ತಲಕಾಡು, ಬಿ.ರಾಜೆಶ್ ಮತ್ತು ಮೈಸೂರಿನ ರಂಗ ಕಲಾವಿದರು, ರಂಗ ತಂಡಗಳು ಭಾಗವಹಿಸಲಿವೆ ಎಂದು “ದೇಸಿರಂಗ” ತಿಳಿಸಿದೆ.

Leave a Reply

comments

Related Articles

error: