ಮೈಸೂರು

ಜು.25ಕ್ಕೆ ಪ್ರೊ.ಯು.ಆರ್.ರಾವ್ : ಶ್ರದ್ಧಾಂಜಲಿ ಸಭೆ

ಮೈಸೂರು,ಜು.24 : ಹಿರಿಯ ವಿಜ್ಞಾನಿ ಇಸ್ರೋ ಮಾಜಿ ಅಧ್ಯಕ್ಷ ಪ್ರೊ.ಯು.ಆರ್.ರಾವ್ ಅವರ ಶ್ರದ್ಧಾಂಜಲಿ ಸಭೆಯನ್ನು ಜು.25ರ ಸಂಜೆ 5.30ಕ್ಕೆ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮಮಂದಿರದಲ್ಲಿ  ಮೈಸೂರು ನಗರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದಿಂದ ಆಯೋಜಿಸಲಾಗಿದೆ.

ಇತಿಹಾಸ ತಜ್ಞ ಶಲ್ವಪೀಳೆ ಅಯ್ಯಂಗಾರ್ ರಾವ್ ಸಾಧನೆಗಳ ಬಗ್ಗೆ ಮಾತನಾಡುವರು.

ಧಾರ್ಮಿಕ ಮುಖಂಡರಾದ ಬಾನುಪ್ರಕಾಶ್ ಶರ್ಮಾ, ಇಳೆಆಳ್ವಾರ್ ಸ್ವಾಮೀಜಿ, ಮಾಜಿ ಸಚಿವ ಎಸ್.ಎ.ರಾಮದಾಸ್, ಮುಖಂಡರಾದ ಹೆಚ್.ವಿ.ರಾಜೀವ್, ಕೆ.ಆರ್.ಮೋಹನ್ ಕುಮಾರ್, ಪಣೀಶ್, ಕೆ.ರಘುರಾಮ್ ವಾಜಪೇಯಿ, ಆರ್.ಜೆ.ನರಸಿಂಹ ಅಯ್ಯಂಗಾರ್, ಟಿ.ಎಸ್.ರವಿಶಂಕರ್, ನಂ.ಶ್ರೀಕಂಠಕುಮಾರ್, ಬಿ.ವಿ.ಮಂಜುನಾಥ್ ಮೊದಲಾದವರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: