ಮೈಸೂರು

ಅ.20: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಸಾಧಕರಿಗೆ ಸನ್ಮಾನ

ಕರ್ನಾಟಕ ಸರ್ಕಾರದ ಅಂಗಸಂಸ್ಥೆಯಾಗಿರುವ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಹಲವು ಸಾಧಕರು ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಬಿಡಾರಂ ಕೃಷ್ಣಪ್ಪನವರ ಶ್ರೀ ಪ್ರಸನ್ನ ಸೀತಾರಾಮ ಮಂದಿರದಲ್ಲಿ ಅ.20, ಗುರುವಾರದಂದು ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಗಂಗಮ್ಮ ಕೇಶವಮೂರ್ತಿಯವರು ವಹಿಸಲಿದ್ದಾರೆ.

ಸನ್ಮಾನ ಸ್ವೀಕರಿಸಲಿರುವ ಸಾಧಕರು:

  • ವಿದ್ವಾನ್ ಟಿ.ಪಿ. ವೈದ್ಯನಾಥನ್, ಮೈಸೂರು – ಸಂಗೀತ
  • ವಿದುಷಿ ವಿಲಾಸಕುಮಾರಿ ಶರ್ಮಾ, ಮೈಸೂರು – ಗಮಕ
  • ಲಲಿತಾ ರಾವ್, ಮೈಸೂರು – ನೃತ್ಯ
  • ಎಸ್. ಶಾರದಮ್ಮ, ಮೈಸೂರು – ಸುಗಮ ಸಂಗೀತ
  • ವಾಣಿ ದ್ವಾರಕಾನಾಥ್, ಮೈಸೂರು – ಹರಿಕಥೆ

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ:

ದಂದ್ವ ಗಾಯನ: ವಿದುಷಿ ಗೀತಾ ಪುಟ್ಟಿ ಮತ್ತು ವಿದುಷಿ ವಾರುಣಿ ಪಿ ರಾವ್, ಮೈಸೂರು.

ಸುಗಮ ಸಂಗೀತ: ಕು. ನಿತ್ಯಶ್ರೀ ಮತ್ತು ತಂಡ, ಮೈಸೂರು.

Leave a Reply

comments

Related Articles

error: