ಮೈಸೂರು

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಬೀಟ್ ಪೋಲಿಸ್ ವ್ಯವಸ್ಥೆ ಸಹಕಾರಿಯಾಗಲಿದೆ: ಎಎಸ್‍ಐ ವಿಜೆಯೇಂದರ್

ಮೈಸೂರು,(ಬೈಲಕುಪ್ಪೆ)ಜು.24:-  ಪೋಲಿಸರು ಹಾಗೂ ಸಾರ್ವಜನಿಕರ ಮಧ್ಯೆ ಜನಸ್ನೇಹಿ ವ್ಯವಸ್ಥೆ ರೂಪುಗೊಂಡಿದ್ದು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕಾರಿಯಾಗಲಿದೆ ಎಂದು ಎಎಸ್‍ಐ ವಿಜೆಯೇಂದರ್ ಅಭಿಪ್ರಾಯ ಪಟ್ಟರು.
ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ವೆಂಕಟೇಶ್ ಬಡಾವಣೆಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ರವಿ ಡಿ ಚೆನಣ್ಣನವರ್ ಮಾರ್ಗದರ್ಶನದಲ್ಲಿ ಆಯೋಜಿಸಿದ್ದ ಬೀಟ್ ಕುಂದುಕೊರತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರಕಾರದ ಮಹಾತ್ವಕಾಂಕ್ಷಿ ಯೋಜನೆ “ಬೀಟ್”ಪೋಲಿಸ್ ವ್ಯವಸ್ಥೆಯಿಂದ ಆಯಾ ವಿಭಾಗದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿದ್ದು, ಗಲಭೆ ಇನ್ನಿತರ ಚಟುವಟಿಕೆಯ ಮಾಹಿತಿ ಜನರಿಂದ “ಬೀಟ್” ಪೋಲಿಸರಿಗೆ ದೊರಕಲಿದೆ. 29 ಬೀಟ್ ಸಿಬ್ಬಂದಿ ಬೈಲಕುಪ್ಪೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಬೀಟ್ ಪೋಲಿಸರಿಗೆ ಮಾಹಿತಿ ನೀಡಬಹುದು. ಪೋಲಿಸರ ಸೇವೆ ಸಾರ್ವಜನಿಕರ ಸೇವೆಯಾಗಿದೆ. ಠಾಣೆಗೆ ಬರಲು ಹೆದರುವ ಪರಿಸ್ಥಿತಿ ಈಗಿಲ್ಲ ಎಂದು ಹೇಳಿದರು,
ಬೈಲಕುಪ್ಪೆಯ ಕೆಲವು ರಸ್ತೆಗಳು ಸರಿಯಿಲ್ಲ, ರಾತ್ರಿಯ ವೇಳೆಯಲ್ಲಿ ಪುಂಡಪೋಕರಿಗಳು ಓಡಾಡುವುದರ ಕುರಿತು ಸಾರ್ವಜನಿಕರು ಪೋಲಿಸರಿಗೆ  ದೂರು ನೀಡಿ ಎಂದರು.  ಗ್ರಾಮ ಪಂಚಾಯತ್ ಸದಸ್ಯೆ ಗೀತಾ  ಮಾತನಾಡಿ ಬೈಲಕುಪ್ಪೆಯಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಾಯಿಗಳಿಗೆ ಕಡಿವಾಣ ಹಾಕಲು ಸಂಬಂಧ ಪಟ್ಟ ಇಲಾಖೆ ತಿಳಿಸಿಕೊಡಬೇಕಾಗಿ ಮನವಿ ಮಾಡಿಕೊಂಡರು. ಸಿಬ್ಬಂದಿಗಳಾದ ನಂದೀಶ, ಬಡವಾಣೆಯ ಬೀಟ್ ಪೋಲಿಸ್ ಅಶೋಕ, ದೊರೆಸ್ವಾಮಿ, ಸಾರ್ವಜನಿಕರು ಭಾಗವಹಿಸಿದ್ದರು. (ಆರ್.ಬಿ.ಆರ್,ಎಸ್.ಎಚ್)

Leave a Reply

comments

Related Articles

error: