ಸುದ್ದಿ ಸಂಕ್ಷಿಪ್ತ

ಜು.27ಕ್ಕೆ ಕಾರ್ಮಿಕ ಹಕ್ಕುಗಳ ಕಾರ್ಯಾಗಾರ

ಮೈಸೂರು,ಜು.24 : ಕಾರ್ಮಿಕ ಹಕ್ಕುಗಳ ಕಾರ್ಯಾಗಾರವನ್ನು ಜು.27ರ ಮಧ್ಯಾಹ್ನ 1ಕ್ಕೆ ಜೆ.ಎಲ್.ಬಿ.ರಸ್ತೆಯ ರೋಟರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ, ಕಾರ್ಮಿಕ ಇಲಾಖೆ ಹಾಗೂ ಇ.ಎಸ್.ಐ ಮತ್ತು ಪಿ.ಎಫ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆಯುವ ಕಾರ್ಯಾಗಾರವನನ್ನು ನ್ಯಾಯಾಧೀಶ ಎನ್.ಎಂ.ರವಿ ಉದ್ಘಾಟಿಸುವರು. ಕೆ.ರಘುರಾಮ್ ವಾಜಪೇಯಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಎ.ಸಿ.ತಮ್ಮಣ್ಣ, ಸಚಿನ್ ಸೌರಭ್, ಡಾ.ರಾಜೇಂದ್ರ ಎಲ್.ಚಿಲಕ್ವಾಡ್ ಮೊದಲಾದವರು ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: