ದೇಶ

ಸಿದ್ಧವಾಗಿದೆ ಕಲಾಂ ಮೇಣದ ಪ್ರತಿಮೆ

ಜೈಪುರ,ಜು.24-ಮಾಜಿ ರಾಷ್ಟ್ರಪತಿ ದಿವಗಂತ ಡಾ.ಎ.ಪಿ.ಜ.ಅಬ್ದುಲ್ ಕಲಾಂ ಅವರ ಮೇಣ ಪ್ರತಿಮೆ ಸಿದ್ಧವಾಗಿದೆ.

ಜೈಪುರದ ವ್ಯಾಕ್ಸ್ ಮ್ಯೂಸಿಯಂನಲ್ಲಿ 25 ಕೆ.ಜಿ. ಮೇಣದಿಂದ ಕಲಾಂ ಅವರ ಪ್ರತಿಮೆ ಸಿದ್ಧವಾಗಿದೆ. ಪ್ರತಿಮೆ ಮಾಡಲು ಮ್ಯೂಸಿಯಂನವರು ಸುಮಾರು 3 ತಿಂಗಳ ಕಾಲ ಸಮಯ ತೆಗೆದುಕೊಂಡಿದ್ದಾರೆ.

ಜೈಪುರ ವ್ಯಾಕ್ಸ್ ಮ್ಯೂಜಿಯಂ ಸಂಸ್ಥಾಪಕ ನಿರ್ದೇಶಕ ಅನೂಪ್ ಪ್ರಕಾರ, ಜೈಪುರದ ವ್ಯಾಕ್ಸ್ ಮ್ಯೂಸಿಯಂನಲ್ಲಿ ಸಿದ್ಧವಾಗಿರುವ ಕಲಾಂ ಮೇಣದ ಪ್ರತಿಮೆ ರಾಮೇಶ್ವರದ ಜ್ಞಾನ ಕೇಂದ್ರದಲ್ಲಿಡಬೇಕೆನ್ನುವುದು ಕುಟುಂಬಸ್ಥರ ಬಯಕೆಯಂತೆ. ಕುಟುಂಬಸ್ಥರ ಆಸೆಯಂತೆ ವ್ಯಾಕ್ಸ್ ಮ್ಯೂಜಿಯಂ ಮೇಣದ ಪ್ರತಿಮೆಯನ್ನು ಜ್ಞಾನ ಕೇಂದ್ರಕ್ಕೆ ನೀಡಲಿದೆ ಎಂದಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: