ಮೈಸೂರು

ಕನಕದಾಸ ಜಯಂತಿ: 22 ಕ್ಕೆ ಪೂರ್ವಭಾವಿ ಸಭೆ

ಶ್ರೀ ಕಾಗಿನೆಲೆ ಕನಕಗುರುಪೀಠದ ಶಾಖಾಮಠ ಸಿದ್ಧಾರ್ಥ ನಗರ ಮೈಸೂರು – ಇದರ ಅಂಗಸಂಸ್ಥೆಯಾದ ಸಂತ ಶ್ರೀ ಕನಕದಾಸರ ಜಯಂತ್ಯೋತ್ಸವ ಸಮಿತಿ ವತಿಯಿಂದ ಕನಕದಾಸರ 523ನೇ ಜಯಂತ್ಯೋತ್ಸವ ಆಚರಿಸುವ ಸಂಬಂಧ ಅ.22, ಶನಿವಾರದಂದು ಪೂರ್ವಭಾವಿ ಸಭೆ ಕರೆಯಲಾಗಿದೆ. ಸಮಿತಿಯ ಎಲ್ಲ ಸದಸ್ಯರು, ಸಮಾಜದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಚುನಾಯಿತಿ ಪ್ರತಿನಿಧಿಗಳು, ಮಾಜಿ ಪ್ರತಿನಿಧಿಗಳು, ಯುವ ಸಂಘಟನೆಯ ಮುಖಂಡರುಗಳು, ಮಹಿಳಾ ಸಂಘಟನೆಗಳ ಮುಖಂಡರು ಭಾಗವಹಿಸಬೇಕೆಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಬ್ಯಾಂಕ್ ಎಂ. ಪುಟ್ಟಸ್ವಾಮಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 98451 16664.

Leave a Reply

comments

Related Articles

error: