ಮೈಸೂರು

ಎನ್‍ಐಇ ಮೆಕ್ಯಾನಿಕಲ್ ವಿಭಾಗದಿಂದ ಕಾರ್ಯಾಗಾರ

ಮೈಸೂರಿನ ಎನ್‍ಐಇ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ‘ಹಣಕಾಸು ಸಂ‍ಸ್ಥೆಗೆ ಪ್ರಸ್ತಾವನೆ ಬರೆಯುವ’ ಬಗ್ಗೆ ಕಾರ್ಯಾಗಾರ ನಡೆಯಿತು.

ಮೈಸೂರು ವಿವಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊಫೆಸರ್ ಮತ್ತು ಅಧ್ಯಕ್ಷ ಡಾ.ಡಿ.ಎಸ್. ಗುರು ಕಾರ್ಯಾಗಾರವನ್ನು ಉದ್ಘಾಟಿಸಿದರು. ಬಳಿಕ ಪ್ರಸ್ತಾವನೆಯನ್ನು ಬರೆಯುವ ಪರಿಣಾಮಕಾರಿ ಮಾರ್ಗಗಳ ಬಗ್ಗೆ ತಿಳಿಸಿದರು. ಎನ್‍ಐಇ ಕಾಲೇಜಿನ ಡೀನ್ ಡಾ.ಜಿ.ಎಸ್. ಸುರೇಶ್ ಅಧ್ಯಕ್ಷತೆ ವಹಿಸಿದ್ದರು.

ಸಂಶೋಧನೆ ಮತ್ತು ಇತರ ಪ್ರಾಜೆಕ್ಟ್‍ಗಳ ಬಗ್ಗೆ ಉತ್ತಮ ಪ್ರಸ್ತಾವನೆ ಬರೆದು ಪ್ರಮುಖ ಹಣಕಾಸು ಸಂಸ್ಥೆಗಳಿಂದ (ಯುಜಿಸಿ,ಎಐಸಿಟಿಇ, ಡಿಎಸ್‍ಟಿ) ಹಣಕಾಸು ಸಹಾಯ ಪಡೆಯುವುದು ಹೇಗೆ ಎಂಬುದನ್ನು ತಿಳಿಸುವ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಎನ್‍ಐಇ ಕಾಲೇಜಿನ ಸುಮಾರು 40 ಮಂದಿ ಉಪನ್ಯಾಸಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಡಾ.ಎನ್.ವಿ. ರಾಘವೇಂದ್ರ, ಮೆಕ್ಯಾನಿಕಲ್ ವಿಭಾಗದ ಎನ್‍. ಶರತ್ ಚಂದ್ರ ಮತ್ತು ಸುಹಾಸ್ ಕಾರ್ಯಾಗಾರವನ್ನು ಸಂಯೋಜಿಸಿದ್ದರು.

 

Leave a Reply

comments

Related Articles

error: