ಕ್ರೀಡೆ

ಕೌರ್ ಗೆ ಡಿಎಸ್ಪಿ ಹಂತದ ಹುದ್ದೆ ನೀಡಲು ಮುಂದಾದ ಪಂಜಾಬ್ ಸರ್ಕಾರ

ಚಂಢೀಗಡ,ಜು.24-ಭಾರತ ಮಹಿಳಾ ತಂಡದ ಸ್ಟಾರ್ ಬ್ಯಾಟ್ಸ್ ವುಮನ್ ಹರ್ಮನ್ ಪ್ರೀತ್ ಕೌರ್ ಗೆ ಡಿಎಸ್ಪಿ ಹಂತದ ಹುದ್ದೆಯನ್ನು ನೀಡಲು ಪಂಜಾಬ್ ಸರ್ಕಾರ ಮುಂದಾಗಿದೆ.

ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿ ಹಂತದ ಹುದ್ದೆ ನೀಡುವುದಾಗಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ.

ಮೊಗಾದಲ್ಲಿ ಹರ್ಮನ್ ಪ್ರೀತ್ ಅವರ ತಂದೆ ಹರ್ಮಂದರ್ ಸಿಂಗ್ ಅವರೊಂದಿಗೆ ಡಿಎಸ್ಪಿ ಹುದ್ದೆ ನೀಡುವುದರ ಬಗ್ಗೆ ಮುಖ್ಯಮಂತ್ರಿ ಸಿಂಗ್ ಮಾತನಾಡಿದ್ದಾರೆ. ಈಗಾಗಲೇ ಕೌರ್ ಅವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಅಮರೀಂದರ್ ಸಿಂಗ್ ನೇತೃತ್ವ ಪಂಜಾಬ್ ಸರ್ಕಾರ ಹೇಳಿದೆ.

ಇಂಗ್ಲೆಂಡ್ ನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಹರ್ಮನ್ ಪ್ರೀತ್ ತಮ್ಮ ಪ್ರಭಾವಿ ಆಟದಿಂದ ತಂಡವನ್ನು ಫೈನಲ್ ಗೆ ಕೊಂಡೊಯ್ದಿದ್ದರು. ಆಸ್ಟ್ರೇಲಿಯಾ ವಿರುದ್ಧ ನಿರ್ಣಾಯಕ ಸೆಮೀಸ್ ನಲ್ಲಿ ಅಜೇಯ 171 ರನ್ ಗಳಿಸಿ ತಂಡದ ಜಯದಲ್ಲಿ ಮಹತ್ವದ ಪಾತ್ರವಹಿಸಿದ್ದರು. (ವರದಿ-ಎಂ.ಎನ್)

 

Leave a Reply

comments

Related Articles

error: