ಮೈಸೂರು

ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡ ಆಯುಷ್ ಟ್ಯಾಬ್ಲೋಗೆ ಪ್ರಥಮ ಬಹುಮಾನ

ಮೈಸೂರು ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡ ಅಖಿಲ ಭಾರತ ವಾಕ್ ಮತ್ತು ಶ್ರವಣ(ಆಯುಷ್) ಸಂಸ್ಥೆಯ ಟ್ಯಾಬ್ಲೋವನ್ನು ಕಲಾತ್ಮಕವಾಗಿ ರೂಪಿಸಿರುವ ಟ್ಯಾಬ್ಲೋ ಎಂದು ಗುರುತಿಸಿ ಪ್ರಥಮ ಸ್ಥಾನ ನೀಡಲಾಗಿದೆ.

ಸರಕಾರಿ ಅತಿಥಿ ಗೃಹದಲ್ಲಿ ನಡೆದ ಟ್ಯಾಬ್ಲೋಗಳಿಗೆ ರಾಜ್ಯ ಮಟ್ಟದ ವಿಭಾಗದಲ್ಲಿ ಬಹುಮಾನ ವಿತರಣೆ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಆಯುಷ್‍ನ ಮಾಹಿತಿ ಮತ್ತು ಪ್ರಚಾರ ಅಧಿಕಾರಿ ಎ.ಆರ್. ಕೀರ್ತಿ ಅವರಿಗೆ ಬಹುಮಾನ ವಿತರಿಸಿದರು.

ಶಬ್ಧ ಬಹು ಮುಖ್ಯವಾಗಿದ್ದು, ಅದೇ ರೀತಿ ಶಬ್ಧ ಮಾಲಿನ್ಯ ಆಗದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ ಎಂಬ ಸಂದೇಶ ಸಾರುವ ಟ್ಯಾಬ್ಲೋವನ್ನು ಆಯುಷ್ ರಚಿಸಿತ್ತು. ವಾಕ್‍ ಮತ್ತು ಶ್ರವಣ ವಿಭಾಗದಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಾ ಬಂದಿರುವ ಆಯುಷ್‍ಗೆ 51 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾರ್ವಜನಿಕ ಅರಿವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಇದರಂಗವಾಗಿ ಟ್ಯಾಬ್ಲೋವನ್ನು ರಚಿಸಿ, ಶಬ್ಧದ ಪ್ರಾಮುಖ್ಯತೆ ಮತ್ತು ಶಬ್ಧ ಮಾಲಿನ್ಯ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಯತ್ನಿಸಿದೆ.

 

Leave a Reply

comments

Related Articles

error: