ಕರ್ನಾಟಕಮೈಸೂರು

ಜ್ಯೋತಿಷಿ ಬಾಲಸುಬ್ರಹ್ಮಣ್ಯಂಸ್ವಾಮಿಯವರಿಗೆ ಡಾಕ್ಟರೇಟ್ ಪದವಿ ಪ್ರದಾನ

ಹೈದರಾಬಾದ್ ನ ಇಂಡಿಯನ್ ವರ್ಚ್ಯೂವಲ್ ಯುನಿವರ್ಸಿಟಿ ಫಾರಾಪೀಸ್ ಆ್ಯಂಡ್ ಎಜ್ಯುಕೇಶನ್ ಸಂಸ್ಥೆ ಬಿಳಿಗಿರಿ ರಂಗನಬೆಟ್ಟದ ಜ್ಯೋತಿಷಿ ಬಾಲಸುಬ್ರಹ್ಮಣ್ಯಂಸ್ವಾಮಿ ಅವರಿಗೆ ಅವರು ಸಲ್ಲಿಸುತ್ತಿರುವ ಸಮಾಜ ಸೇವೆ ಹಾಗೂ ಗಿರಿಜನರಿಗೆ ಸಲ್ಲಿಸುತ್ತಿರುವ ಸೇವೆ ಗುರುತಿಸಿ ಡಾಕ್ಟರೇಟ್ ನೀಡಿ ಗೌರವಿಸಿದೆ.

ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ನಿವಾಸಿಗಳಾದ ಜಯಮ್ಮ-ಹನುಮಂತನಾಯಕ ದಂಪತಿಗಳ ಪುತ್ರರಾಗಿರುವ ಇವರು ಬಾಲ್ಯದಿಂದಲೇ ಸಾಮಾಜಿಕ ಕಳಕಳಿ ಬೆಳೆಸಿಕೊಂಡಿದ್ದರು. ತಂದೆಯಿಂದ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರದ ಜೊತೆಗೆ ಕಾಡಿನಲ್ಲಿ ದೊರೆಯುವ ಆಯುರ್ವೇದ ಔಷಧಿ ಗುಣವುಳ್ಳ ಗಿಡಮೂಲಿಕೆಗಳಿಂದ ಔಷಧಿ ತಯಾರಿಸಿ ತಮ್ಮ ಬಳಿಗೆ ಬರುವ ರೋಗಿಗಳಿಗೆ ನೀಡಿ ಅವರನ್ನು ಗುಣಮುಖರನ್ನಾಗಿಸುತ್ತಿದ್ದರು. ಚರ್ಮರೋಗ, ಸಕ್ಕರೆ ಕಾಯಿಲೆ, ಅಸ್ತಮ, ಜಾಂಡೀಸ್ ಸೇರಿದಂತೆ ಹಲವಾರು ರೋಗಿಗಳು ಇವರಿಂದ ಔಷಧಿ ಪಡೆದು ಗುಣಮುಖರಾಗಿದ್ದಾರೆ.

ಡಾಕ್ಟರೇಟ್ ಸಿಕ್ಕಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು ನನಗೆ ಹೈದರಾಬಾದ್ ನ ಇಂಡಿಯನ್ ವರ್ಚ್ಯೂವಲ್ ಯುನಿವರ್ಸಿಟಿ ಫಾರಾಪೀಸ್ ಆ್ಯಂಡ್ ಎಜ್ಯುಕೇಶನ್ ಸಂಸ್ಥೆ  ನಾನು ಮಾಡುತ್ತಿರುವ ಸಮಾಜ ಸೇವೆಯನ್ನು ಗುರುತಿಸಿ ಡಾಕ್ಟರೇಟ್ ಕೊಟ್ಟು ಗೌರವಿಸಿರುವುದು ನನ್ನ ಶ್ರಮಕ್ಕೆ ಸಂದ ಪ್ರತಿಫಲ. ಮುಂದಿನ ಸಮಾಜ ಸೇವೆಗೆ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.

ಆಶ್ರಯಟ್ರಸ್ಟ್ ಯೋಜನೆಯಡಿ ಬಿಳಿಗಿರಿರಂಗನ ಬೆಟ್ಟದಲ್ಲಿ ಗಿರಿಜನರು ಹಾಗೂ ಇತರ ಹಿಂದುಳಿದ ಜನರಿಗೋಸ್ಕರ ವೃದ್ಧಾಶ್ರಮ, ಅನಾಥಾಶ್ರಮ ಕಟ್ಟಿಸುವುದರ ಜೊತೆಗೆ ಗುರುಕುಲವನ್ನು ಕಟ್ಟಿಸಿ ಬೆಳೆಸಬೇಕೆಂಬ ಮಹದಾಸೆಯನ್ನು ಹೊಂದಿರುವುದಾಗಿ ತಿಳಿಸಿದರು.

Leave a Reply

comments

Related Articles

error: