ದೇಶಪ್ರಮುಖ ಸುದ್ದಿ

ಭಾರತ ದೇಶದ ಪ್ರಥಮ ಪ್ರಜೆಯ ಪುತ್ರಿ ಏರ್ ಹೋಸ್ಟೆಸ್ : ಸರಳತೆಯಲ್ಲಿ ದೇಶಕ್ಕೇ ಮಾದರಿ

ದೇಶ(ನವದೆಹಲಿ)ಜು.25:-ರಾಮ್ ನಾಥ್ ಕೋವಿಂದ್  ಹೆಸರು  ದೇಶದೆಲ್ಲೆಡೆ  ಕೇಳಿ ಬರುತ್ತಿದೆ. ಭಾರತ ರಾಷ್ಟ್ರಪತಿ ಪದವಿಗೆ ಎನ್.ಡಿ.ಎ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರವೇ ಅವರ ಹೆಸರು ಎಲ್ಲರಿಗೂ ಪರಿಚಿತವಾಗಿದ್ದು.  ಇದಕ್ಕೂ ಮೊದಲು ಅವರು ಯಾರೆಂದು ಬಹಳ ಜನರಿಗೆ ಗೊತ್ತಿರಲಿಲ್ಲ. ಆದರೆ, ಅವರೀಗ 125 ಕೋಟಿ ಜನಸಂಖ್ಯೆಯುಳ್ಳ ಭಾರತ ದೇಶದ ಪ್ರಥಮ ಪ್ರಜೆ. ಸರಳತೆಗೆ ಅವರು ದೇಶಕ್ಕೇ ಆದರ್ಶ ಪ್ರಾಯರಾಗಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ  ಕಾರ್ಯಕರ್ತರಾಗಿ ಬೆಳೆದ ಕೋವಿಂದ್, ಸರಕಾರದ ಹಣವನ್ನು ತನ್ನ ಸ್ವಂತಕ್ಕಾಗಲಿ ತನ್ನ ಕುಟುಂಬದವರಿಗಾಗಲಿ ಉಪಯೋಗಿಸುತ್ತಿಲ್ಲವಂತೆ. ಇವರ ಮಗಳು ಏರ್ ಹೋಸ್ಟೆಸ್.

ಇಷ್ಟಲ್ಲದೇ ತನ್ನ ಕುಟುಂಬ, ಬಂಧು ಮಿತ್ರರಿಗೆ ಉದ್ಯೋಗ, ಗುತ್ತಿಗೆ ಮುಂತಾದುವುಗಳನ್ನು ನೀಡಿ ಅವರನ್ನು ಕೋಟೀಶ್ವರರನನ್ನಾಗಿಸುವ ಯಾವುದೇ ಉದ್ದೇಶ ಅವರಿಗಿಲ್ಲ. ಆದುದರಿಂದಲೇ ಅವರ ಪುತ್ರಿ ಬಹಳ ಸಾಧಾರಣವಾದ ಕೆಲಸಮಾಡುತ್ತಿದ್ದಾರೆ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮ್ ನಾಥ್ ಕೋವಿಂದ್ ರವರ ಪುತ್ರಿ ಸ್ವಾತಿ ಏರ್ ಇಂಡಿಯಾ ಸಂಸ್ಥೆಯಲ್ಲಿ ಗಗನ ಪರಿಚಾರಿಕೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಆಕೆಗಿರುವ ಅರ್ಹತೆಯೆಂದು ಎಲ್ಲರೂ ಭಾವಿಸುತ್ತಿದ್ದರು. ಆದರೆ, ಆಕೆ ರಾಷ್ಟ್ರಪತಿಯ ಪುತ್ರಿಯೆಂದು ಇತ್ತೀಚೆಗೆ  ಎಲ್ಲರಿಗೂ ತಿಳಿಯಿತು. ಆಸ್ಟ್ರೇಲಿಯಾ, ಯೂರೋಪ್, ಅಮೆರಿಕಾ ದೇಶಗಳಿಗೆ ಬೋಯಿಂಗ್ 777,787 ವಿಮಾನಗಳಲ್ಲಿ ಸ್ವಾತಿ ಏರ್ ಹೋಸ್ಟೆಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಂದೆಂದೂ ತಾನು ರಾಮ್ ನಾಥ್ ಕೋವಿಂದ್ ರವರ ಪುತ್ರಿಯೆಂದು ಯಾರಿಗೂ ತಿಳಿಸಿರಲಿಲ್ಲ. ಸಾಮಾನ್ಯ ಉದ್ಯೋಗಿಯಂತೆ ವರ್ತಿಸುತ್ತಿದ್ದರೇ ಹೊರತು, ತನ್ನನ್ನು ತಾನು ಹೊಗಳಿಕೊಳ್ಳುತ್ತಿರಲಿಲ್ಲ. ಹಾಗಾಗಿ ಆಕೆಯ ಸಹೋದ್ಯೋಗಿಗಳು ಅಚ್ಚರಿಗೊಳ್ಳುತ್ತಿದ್ದಾರೆ. ಇಷ್ಟು ದೊಡ್ಡ ಸೆಲಬ್ರಿಟಿಯಾಗಿದ್ದುಕೊಂಡು ಸಾಮಾನ್ಯಳಂತೆ ಇದ್ದಾಳಲ್ಲ ಎಂದು ಎಲ್ಲರೂ ಹೆಮ್ಮೆಪಡುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: