ಮೈಸೂರು

ಕಾವೇರಿ ತೀರ್ಪು ರಾಜ್ಯದ ಪರವಾಗಿ ಬರಲಿ : ವಿಶೇಷ ಪ್ರಾರ್ಥನೆ

ಕಾವೇರಿ ತೀರ್ಪು ಕರ್ನಾಟಕದ ಪರವಾಗಿ ಬರಲಿ ಎಂದು ಪ್ರಾರ್ಥಿಸಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಮಂಗಳವಾರ ಮೈಸೂರಿನಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಮಂಗಳವಾರ ಅಂದರೆ ಅಕ್ಟೋಬರ್ 18ರಂದು ಕಾವೇರಿ ವಿವಾದದ ಕುರಿತಾದ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಕಟಿಸಲಿದೆ.

ಮಂಗಳವಾರ ಬೆಳಿಗ್ಗೆ ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತಿ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಬಂದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕಾವೇರಿ ನಮ್ಮವಳು. ನಮಗೆ ನ್ಯಾಯ ನೀಡಿ ಎಂಬ ಘೋಷಣೆಗಳನ್ನು ಕೂಗಿದರು.  ಈ ಸಂದರ್ಭ ನಮ್ಮ ನಡಿಗೆ ಸಮೃದ್ಧ ಕರ್ನಾಟಕದ ಕಡೆಗೆ, ದಂಗೆ ಎದ್ದರೆ ಜಯ ನಮ್ಮದು, ಸುಮ್ಮನಿದ್ದರೆ ಸೋಲು ತಪ್ಪದು ಎನ್ನುವ ಬರಹಗಳಿಂದ ಕೂಡಿದ ಬ್ಯಾನರ್ ಗಳು ಕಂಡು ಬಂತು.

Leave a Reply

comments

Related Articles

error: