Uncategorizedಪ್ರಮುಖ ಸುದ್ದಿ

ಮದ್ಯವ್ಯಸನಿಗಳಿಂದ ಕಸದ ತೊಟ್ಟಿಯಾದ ರೈತರ ಜಮೀನುಗಳು

ಪ್ರಮುಖ ಸುದ್ದಿ, ಬೇಗೂರು, ಜು.25: ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮದ್ಯದಂಗಡಿಗಳನ್ನು ಬಂದ್ ಮಾಡಿದ ಪರಿಣಾಮ ಮದ್ಯಪಾನಿಗಳಿಗಲ್ಲದೇ ಗ್ರಾಮದ ರೈತರು ಸಹ ತೊಂದರೆ ಅನುಭವಿಸುವಂತಾಗಿದೆ.

ಮದ್ಯವ್ಯಸನಿಗಳು ಕುಡಿದು ಬಿಸಾಡಿದ ಬಾಟಲ್ ಗಳು, ಪ್ಯಾಕೆಟ್ ಗಳಿಂದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸುಪ್ರಿಂ ಕೋರ್ಟ್ ಆದೇಶದನ್ವಯ ಗ್ರಾಮದಲ್ಲಿ ಎಲ್ಲಾ ಬಾರ್ ಹಾಗೂ ಮದ್ಯದಂಗಡಿಗಳು ಮುಚ್ಚಿವೆ. ಆದರೆ ಎಂಎಸ್‌ಐಎಲ್ ಮದ್ಯದಂಗಡಿಗೆ ಈ ನಿಯಮ ಅನ್ವಯಿಸಿಲ್ಲದ ಕಾರಣ ಹೋಬಳಿಯಲ್ಲಿ ಎಂಎಸ್‌ಐಎಲ್ ಮದ್ಯದಂಗಡಿ ಮಾತ್ರ ತೆರೆದಿರುತ್ತದೆ. ಇದರಿಂದಾಗಿ ಹೋಬಳಿಯ ಎಲ್ಲಾ ಮದ್ಯಪ್ರಿಯರು ಬೆಳಗ್ಗೆಯಿಂದ ಸಂಜೆಯವರೆಗೂ ಈ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿ ಮಾಡಿ ಅಲ್ಲೇ ಇರುವ ಅಕ್ಕ-ಪಕ್ಕದ ಜಮೀನುಗಳ ಬಳಿ ಕುಡಿದು ಬಾಟಲ್ ಹಾಗೂ ಪ್ಯಾಕೆಟ್ ಗಳನ್ನು  ಬಿಸಾಡುತ್ತಾರೆ. ಇದರಿಂದ  ಜಮೀನುಗಳಲ್ಲಿ ವ್ಯವಸಾಯಕ್ಕೆ ತುಂಬಾ ತೊಂದರೆಯಾಗುತ್ತಿದೆ. ಅಲ್ಲದೆ ಮದ್ಯದಂಗಡಿ ಪಕ್ಕದಲ್ಲೇ ಮಾಂಸದಂಗಡಿಗಳು ತಲೆ ಎತ್ತಿದ್ದು, ಜಮೀನುಗಳು ಕಸದ  ಬುಟ್ಟಿಗಳಾಗಿ ಮಾರ್ಪಾಡಾಗುತ್ತಿವೆ ಈ ಮಿತಿಮೀರಿದ ತೊಟ್ಟಿಗಳಾಗಿವೆ. ಕುಡುಕರ ಹಾವಳಿಯಿಂದ ಹೆಂಗಸರು ಮಕ್ಕಳು ಜಮೀನಿಗೂ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. (ವರದಿ ಬಿ.ಎಂ)

 

Leave a Reply

comments

Related Articles

error: