ಪ್ರಮುಖ ಸುದ್ದಿಮೈಸೂರು

ದೇವರಾಜ ಮಾರುಕಟ್ಟೆ ಕೆಡವುವ ಕ್ರಮಕ್ಕೆ ವಿರೋಧ: ವ್ಯಾಪಾರಸ್ಥರಿಂದ ಧರಣಿ

ಇತ್ತೀಚಿಗೆ ಪತನಗೊಂಡ ದೇವರಾಜ ಮಾರುಕಟ್ಟೆ ಕಟ್ಟಡವನ್ನು ಕೆಡವಿ ನೂತನವಾಗಿ ನಿರ್ಮಿಸಲು ಹೊರಟಿರುವ ಸರಕಾರ ಮತ್ತು ಮೈಸೂರು ಪಾಲಿಕೆಯ ನಿರ್ಧಾರವನ್ನು ಖಂಡಿಸಿ ದೇವರಾಜ ಮಾರುಕಟ್ಟೆಯ ಮಳಿಗೆದಾರರು ಧರಣಿ ನಡೆಸಿದ್ದಾರೆ. ಶಾಸಕ ವಾಸು ಅವರ ಮನೆಯ ಮುಂದೆ ಧರಣಿ ನಡೆಸಿದ ನೂರಾರು ವ್ಯಾಪಾರಸ್ಥರು ದೇವರಾಜ ಮಾರುಕಟ್ಟೆ ಕೆಡವದಂತೆ ಮತ್ತು ಯಥಾಸ್ಥಿತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

ಈಗಾಗಲೇ ಟಾಸ್ಕ್ ಫೋರ್ಸ್ ತಂಡವು ಮೈಸೂರು ಪಾಲಿಕೆಗೆ ದಾಖಲೆ ಸಲ್ಲಿಸಿದ್ದು, ಕಟ್ಟಡವನ್ನು ಕೆಡವಿ ನೂತನವಾಗಿ ನಿರ್ಮಿಸಲು ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ.

120 ವರ್ಷ ಹಳೆಯ ದೇವರಾಜ ಮಾರುಕಟ್ಟೆ ಪತನಗೊಂಡ ಬಗ್ಗೆ ತಜ್ಞರ ಸಮಿತಿಯ ಸದಸ್ಯರಾದ ಶ್ರೀ ಜಯಚಾಮರಾಜೇಂದ್ರ ಕಾಲೇಜ್‍ ಆಫ್ ಇಂಜಿನಿಯರಿಂಗ್‍ನ ಪ್ರಾಂಶುಪಾಲ ಸೈಯೀದ್ ಶಕೀಬ್ ಉರ್ ರೆಹಮಾನ್ ಮತ್ತು ಕರ್ನಾಟಕ ಟಾಸ್ಕ್ ಫೋರ್ಸ್ ಕಮಿಟಿ ಸದಸ್ಯ ಆರ್.ಜಗದೀಶ್ ಅವರು ಕಟ್ಟಡದ ಪರಿಶೀಲನೆ ನಡೆಸಿ ಮೇಯರ್ ಬಿ.ಎಲ್. ಬೈರಪ್ಪ ಉಪಸ್ಥಿತಿಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್‍ರಿಗೆ ವರದಿ ಸಲ್ಲಿಸಿದ್ದರು. ಕಟ್ಟಡದ ಶೇ.80ರಷ್ಟು ಭಾಗ ಶಿಥಿಲಗೊಂಡಿದ್ದು, ಪುನರ್ ನಿರ್ಮಾಣ ಅಸಾಧ್ಯವಾಗಿರುವುದಿಂದ ಅದನ್ನು ಪೂರ್ತಿಯಾಗಿ ಕೆಡವಿ ಮತ್ತೆ ಕಟ್ಟಡ ನಿರ್ಮಿಸುವುದು ಸೂಕ್ತವೆಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಪಾರಂಪರಿಕ ಮೌಲ್ಯಕ್ಕೆ ಹಾನಿಯಾಗದಂತೆ ಕಟ್ಟಡವನ್ನು ಕಟ್ಟಿ ಎಂದು ಸಿಎಂ ಸಿದ್ದರಾಮಯ್ಯ ಅವರು ಕೂಡ ಸೂಚಿಸಿದ್ದರು.

devaraj-market-protest-2

Leave a Reply

comments

Related Articles

error: