ದೇಶಪ್ರಮುಖ ಸುದ್ದಿವಿದೇಶ

ಚೀನಾ ಅಧ್ಯಕ್ಷರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಬೀಜಿಂಗ್, ಜುಲೈ 25 : ಭಾರತ ಹಾಗೂ ಚೀನಾ ನಡುವೆ ಡೋಕ್ಲಾಮ್ ಗಡಿ ಬಿಕ್ಕಟ್ಟು ಉಲ್ಪಣಗೊಂಡಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍ ಮತ್ತು ಪ್ರೀಮಿಯರ್ ಲೇ ಕೆಕ್ಯಾಂಗ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಚೀನಾದ ಪ್ರಮುಖ ಸಾಮಾಜಿಕ ಜಾಲತಾಣ “ಸೀನಾ ವೈಬೋ” ಮೂಲಕ ಜನ್ಮದಿನದ ಶುಭಾಶಯ ಕೋರಿರುವ ಮೋದಿ ಅವರು, ಇಷ್ಟಕ್ಕೇ ಸೀಮಿತವಾಗದೆ ನಾನು ಮತ್ತು ನೀವು (ಚೀನಾ ಅಧ್ಯಕ್ಷರು) ಇತ್ತೀಚೆಗೆ ಆಸ್ತಾನದಲ್ಲಿ ನಡೆದ ಎಸ್‍ಸಿಓ ಶೃಂಗಸಭೆಯಲ್ಲಿ ಭೇಟಿಯಾಗಿದ್ದೆವು, ಭಾರತ-ಚೀನಾ ಸಂಬಧಗಳನ್ನು ಇನ್ನೂ ಸದೃಢಗೊಳಿಸುವ ಬಗ್ಗೆ ಚರ್ಚಿಸಿದ್ದೆವು ಎಂದು ಬರ್ತ್‍ಡೇ ಡಿಪ್ಲೊಮಸಿ ಮಾಡಿದ್ದಾರೆ.

ಕಳೆದ ಜುಲೈ 1 ರಂದು ಚೀನಾ ಪ್ರೀಮಿಯರ್ ಲೀ ಕೆಕ್ಯಾಂಗ್ ಅವರ ಹುಟ್ಟುಹಬ್ಬಕ್ಕೂ ಮೋದಿ ಶುಭ ಕೋರಿದ್ದರು. ಚೀನಾದ ಟ್ವಿಟರ್‍ಗೆ ಪರ್ಯಾಯ ಎನ್ನಬಹುದಾದ “ಸೀನಾ ವೈಬೋ”ದಲ್ಲಿ ಪ್ರಧಾನಿ ಮೋದಿ ಅವರು ಖಾತೆ ಹೊಂದಿದ್ದು, ಸುಮಾರು 1,69,119 ಮಂದಿ ಅವರನ್ನು ಫಾಲೋ ಮಾಡುತ್ತಿದ್ದಾರೆ.

-ಎನ್.ಬಿ.

Leave a Reply

comments

Related Articles

error: