ದೇಶ

ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆಗ್ರಹಿಸಿ ರೈಲ್‍ ರೋಖೋ

ಕೊಯಂಬತ್ತೂರು: ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಆಗ್ರಹಿಸಿ ತಮಿಳುನಾಡಿನ ಸರ್ವ ಪಕ್ಷಗಳು ಮತ್ತು ರೈತ ಸಂಘಗಳು ಸೋಮವಾರದಂದು 48 ಗಂಟೆಗಳ ರೈಲ್‍ ರೋಖೋ ಆರಂಭಿಸಿದ ಹಿನ್ನೆಲೆಯಲ್ಲಿ ದಕ್ಷಿಣ ರೈಲ್ವೆಯು ಮಂಗಳವಾರದಂದು 3 ರೈಲು ಸಂಚಾರವನ್ನು ರದ್ದು ಮಾಡಿದೆ.ಕೊಯಂಬತ್ತೂರು-ಮನ್ನಾರ್‍ಗುಡಿ ಚೆನ್‍ಮೋಝಿ ಎಕ್ಸ್‍ಪ್ರೆಸ್, ಚೆನ್ನೈ ಎಗ್ಮೋರ್-ತಿರುಚಿರಪಳ್ಳಿ ಎಕ್ಸ್‍ಪ್ರೆಸ್ ಮತ್ತು ತಿರುಚಿರಪಳ್ಳಿ-ಚೆನ್ನೈ ಎಗ್ಮೋರ್ ಎಕ್ಸ್‍ಪ್ರೆಸ್ ರೈಲುಗಳ ಸಂಚಾರ ರದ್ದಾಗಿದೆ.

ಸೋಮವಾರ ರಾತ್ರಿ 4 ರೈಲುಗಳ ಸಂಚಾರ ರದ್ದಾಗಿತ್ತು. ಕಾನೂನುಬಾಹಿರ ಸಭೆ ನಡೆಸಿದ ಹಿನ್ನೆಲೆಯಲ್ಲಿ ಡಿಎಂಕೆ ನಾಯಕ ಎಮ್‍.ಕೆ. ಸ್ಟಾಲಿನ್‍ ಮತ್ತು ವಿಸಿಕೆ ನಾಯಕ ಸೇರಿ 5 ಸಾವಿರಕ್ಕೂ ಅಧಿಕ ಮಂದಿಯನ್ನು ಸೋಮವಾರ ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಗಿದೆ.

Leave a Reply

comments

Related Articles

error: