ಸುದ್ದಿ ಸಂಕ್ಷಿಪ್ತ

ಜು.28: ಪಂಡಿತ್ ಇಂದೂಧರ ನಿರೋಡಿಯವರ ಸಂಗೀತ ಕಾರ್ಯಕ್ರಮ

ಮೈಸೂರು,ಜು.25:- ಜುಲೈ 28ರ ಶುಕ್ರವಾರ, ಸಂಜೆ 6 ಗಂಟೆಗೆ ಹಿರಿಯ ಗಾಯಕ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪಂಡಿತ್ ಇಂದೂಧರ ನಿರೋಡಿ ಅವರ ಹಿಂದುಸ್ತಾನಿ ಗಾಯನವನ್ನು ಕುವೆಂಪುನಗರದ ಗಾನಭಾರತಿಯಲ್ಲಿ ಆಯೋಜಿಸಲಾಗಿದೆ.

ಅವರಿಗೆ ಪಂಡಿತ್ ವೀರಭದ್ರಯ್ಯ ಹಿರೇಮಠ ಗಾಯನದಲ್ಲಿ ಸಹಕರಿಸಲಿದ್ದಾರೆ. ಪಂಡಿತ್ ಶ್ರೀರಾಂ ಭಟ್ ಹಾರ್ಮೋನಿಯಂನಲ್ಲಿ ಹಾಗೂ ಪಂಡಿತ್ ರಮೇಶ್ ಧನ್ನೂರ್ ತಬಲಾದಲ್ಲಿ ಸಹಕರಿಸಲಿದ್ದಾರೆ. ಪಂಡಿತ್ ಇಂದೂಧರ ನಿರೋಡಿಯವರಿಗೆ ಸಂಗೀತದ ಮೊದಲ ಪ್ರೇರಣೆ ಸಿಕ್ಕಿದ್ದು ತಂದೆಯವರಿಂದ. ಉಡುಪಿಯ ಗವಾಯಿ ಪಿತ್ರೆ ರಾಮರಾವ್ ಅವರಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದು, ಮುಂದೆ ಮುಂಬಯಿಯ ಹೆಸರಾಂತ ವಿದ್ವಾಂಸರಾಗಿದ್ದ ಪಂಡಿತ್ ಎಸ್.ಸಿ.ಆರ್.ಭಟ್, ಆಚಾರ್ಯ ಕೆ.ಜಿ.ಗಿಂಡೆ, ಪಂಡಿತ್ ಚಿದಾನಂದ ನಗರಕರ್ ಮತ್ತು ದಿನಕರ ಕಾಯ್ಕಿಣಿ ಅವರಲ್ಲಿ ಎರಡು ದಶಕಕ್ಕೂ ಮೀರಿ ವಿದ್ಯಾದಾನ ಪಡೆವ ಅದೃಷ್ಟ ಇವರದ್ದಾಯಿತು. 1955ರಲ್ಲಿ ಆಕಾಶವಾಣಿ ಸಂಗೀತ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಇವರು ಕೇಂದ್ರ ಹಾಗೂ ರಾಜ್ಯ ಸಂಗೀತ ನಾಟಕ ಅಕಾಡಮಿಗಳನ್ನೂ ಒಳಗೊಂಡಂತೆ ಅನೇಕ ಬಿರುದು ಸನ್ಮಾನಗಳನ್ನು ಪಡೆದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: