ಮೈಸೂರು

ಇಸ್ಕಾನ್‍ನಲ್ಲಿ ‘ದಾಮೋದರ ದೀಪೋತ್ಸವ’ದ ಸಂಭ್ರಮ

ಮೈಸೂರು ಜಯನಗರದಲ್ಲಿರುವ ಇಸ್ಕಾನ್‍ನಲ್ಲಿ ಅ.16ರಂದು ದಾಮೋದರ ದೀಪೋತ್ಸವಕ್ಕೆ ಚಾಲನೆ ದೊರೆತಿದ್ದು, ಈ ದೀಪಗಳ ಹಬ್ಬವು ಮಂದಿನ ಒಂದು ತಿಂಗಳವರೆಗೆ ನಡೆಯಲಿದೆ.

ಮೇಯರ್ ಬಿ.ಎಲ್. ಬೈರಪ್ಪ, ಅರಮನೆ ನಿರ್ದೇಶಕ ಸುಬ್ರಹ್ಮಣ್ಯ, ಕಾಪೋರೇಟರ್‍ಗಳಾದ ಶೈಲೇಂದ್ರ ಮತ್ತು ಚನ್ನಪ್ಪ ಅವರು ಇಸ್ಕಾನ್ ಅಧ್ಯಕ್ಷರಾದ ಜೈ ಚೈತನ್ಯ ದಾಸ ಅವರ ಉಪಸ್ಥಿತಿಯಲ್ಲಿ ದಾಮೋದರ ದೀಪೋತ್ಸವಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮವು ನ.14ರವರೆಗೆ ಪ್ರತಿ ದಿನ ಸಂಜೆ 7.30ರಿಂದ 8.30ರವರೆಗೆ ನಡೆಯಲಿದೆ.

ಶ್ರೀಮದ್ ಭಾಗವತಂನಲ್ಲಿ ಹೇಳಿರುವಂತೆ, ಒಂದು ದಿನ ಶ್ರೀಕೃಷ್ಣ ಬೆಣ್ಣೆಯನ್ನು ಕದ್ದು ತಿಂದು ಮೊಸರು ಮತ್ತು ಬೆಣ್ಣೆಯ ಪಾತ್ರೆಯನ್ನು ಒಡೆದು ಹಾಕಿದ್ದ. ಮಗನ ಪುಂಡಾಟದಿಂದ ಬೇಸತ್ತ ಯಶೋದಾ ಕೃಷ್ಣನನ್ನು ಕಟ್ಟಿಹಾಕಲು ಯತ್ನಿಸುತ್ತಾಳೆ. ಮನೆಯಲ್ಲಿರುವ ಎಲ್ಲ ಹಗ್ಗಗಳನ್ನು ತಂದಿ ಕಟ್ಟಲು ನೋಡಿದರೂ, ಅದು ಕೃಷ್ಣನನ್ನು ಕಟ್ಟಲು ಸಾಕಾಗಲ್ಲ. ತಾಯಿ ಯಶೋದ ತನ್ನನ್ನು ಕಟ್ಟಲು ಕಷ್ಟ ಪಡುತ್ತಿರುವುದನ್ನು ನೋಡಿದ ಕೃಷ್ಣ ಕೊನೆಗೆ ಹಗ್ಗದಲ್ಲಿ ಬಂಧಿತನಾಗಲು ಒಪ್ಪುತ್ತಾನೆ. ಇದರಿಂದ ಆತನಿಗೆ ದಾಮೋದರ ಎಂಬ ಹೆಸರು ಬಂದಿದೆ. ‘ದಾಮ’ ಎಂದರೆ ಹಗ್ಗ, ‘ಉದರ’ ಎಂದರೆ ಹೊಟ್ಟೆ.

ಕೃಷ್ಣನ ಭಕ್ತರು ಕಾರ್ತಿಕ ಮಾಸದಲ್ಲಿ ದೀಪಗಳನ್ನು ಹಚ್ಚಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ.

 

Leave a Reply

comments

Related Articles

error: