ಕರ್ನಾಟಕಪ್ರಮುಖ ಸುದ್ದಿ

ಕೃಷಿ ಬೆಲೆ ಆಯೋಗದಲ್ಲಿ ಕೆಲಸ ನಿರ್ವಹಿಸಲು ಒಪ್ಪಂದದ ಮೇರೆಗೆ ಸಿಬ್ಬಂದಿ ನೇಮಕ

ಬೆಂಗಳೂರು, ಜುಲೈ 25 : ಕರ್ನಾಟಕ ಕೃಷಿ ಬೆಲೆ ಆಯೋಗಕ್ಕೆ ಅಗತ್ಯವಿರುವ ತಾಂತ್ರಿಕ ಹುದ್ದೆದಗಳನ್ನು ಒಪ್ಪಂದದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಷರತ್ತಿಗೆ ಒಳಪಟ್ಟು ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಆಗಸ್ಟ್ 11 ರೊಳಗೆ ಸೀಲು ಮಾಡಿದ ಲಕೋಟೆಯಲ್ಲಿ ಮುದ್ದಾಂ/ನೋಂದಣಿ ಅಂಚೆ ಮೂಲಕ ಸಲ್ಲಿಸಬೇಕು. ತಡವಾಗಿ ಬಂದ ಅರ್ಜಿಗಳನ್ನು ಪರಿಶೀಲಿಸಲಾಗುವುದಿಲ್ಲ.

ತಾಂತ್ರಿಕ ಸಲಹೆಗಾರರ ಹುದ್ದೆಗೆ ಕೃಷಿ ಅರ್ಥಶಾಸ್ತ ಅಥವಾ ಕೃಷಿ ಮಾರುಕಟ್ಟೆ ಅಥವಾ ಕೃಷಿ ಸಂಖ್ಯಾಶಾಸ್ತ್ರ ಅಥವಾ ಬೇಸಾಯ ಶಾಸ್ತ್ರ, ಕೃಷಿ ವಿಸ್ತರಣಾ ಅಥವಾ ಕೃಷಿ/ತೋಟಗಾರಿಕೆ ವಿಜ್ಞಾನ ಸಂಬಂಧಪಟ್ಟ ವಿಷಯಗಳಲ್ಲಿ ಪಿ.ಹೆಚ್.ಡಿ. ಪದವಿ ಹೊಂದಿ ಕನಿಷ್ಠ 5 ವರ್ಷಗಳ ಅನುಭವನ ಅಥವಾ ಸ್ನಾತಕೋತ್ತರ ಪದವಿ  ಹೊಂದಿದ್ದು, 10 ವರ್ಷಗಳ ಅನುಭವ, ಮುಂದುವರೆದ ಕಂಪ್ಯೂಟ್‍ರ್ ಮಾಡೆಲ್‍ಗಳು/ಸಾಫ್ಟ್‍ವೇರ್‍ಗಳನ್ನು ಮೇಲಿನ ವಿಷಯಗಳಲ್ಲಿ ಬಳಸುವ ಜ್ಞಾನವಿರಬೇಕು. ರೂ 50,000/- ಗೌರವ ಧನ, ಪ್ರವಾಸ ಕಾಲದಲ್ಲಿ ರಾಜ್ಯ ಸರ್ಕಾರ ನಿಯಮಾವಳಿ ಪ್ರಕಾರ ದಿನಭತ್ಯೆ ನೀಡಲಾಗುವುದು.

ತಾಂತ್ರಿಕ ಸಹಾಯಕರ ಹುದ್ದೆಗೆ ಕೃಷಿ ಅರ್ಥಶಾಸ್ತ ಅಥವಾ ಕೃಷಿ ಮಾರುಕಟ್ಟೆ ಅಥವಾ ಕೃಷಿ ಸಂಖ್ಯಾಶಾಸ್ತ್ರ ಅಥವಾ ಕೃಷಿ ವಿಸ್ತರಣೆ ವಿಷಯಗಳಲ್ಲಿ ಸ್ನಾತಕೋತ್ತರ/ಪಿ.ಎಚ್.ಡಿ. ಪದವಿ ಹೊಂದಿರುವವರು ಅಥವಾ ಎಂ.ಸಿ. ಅರ್ಥಶಾಸ್ತ್ರ ಪದವಿ ಹೊಂದಿದ್ದು ಕೃಷಿಗೆ ಸಂಬಂಧಿಸಿದ ಸಂಶೋಧನೆ/ಅಧ್ಯಯನ/ಕಾರ್ಯ ನಿರ್ವಹಿಸಿರುವ ಅನುಭವನ ಹೊಂದಿರುವವರು ಜೊತೆಗೆ ಮುಂದುವರೆದ ಕಂಪ್ಯೂಟರ್ ಮಾಡೆಲ್‍ಗಳು/ಸಾಫ್ಟ್‍ವೇರ್‍ಗಳನ್ನು ಮೇಲಿನ ವಿಷಯಗಳಲ್ಲಿ ಬಳಸುವ ಜ್ಞಾನವಿರಬೇಕು. ರೂ 25,000/- ಗೌರವ ಧನ, ಪ್ರವಾಸ ಕಾಲದಲ್ಲಿ ರಾಜ್ಯ ಸರ್ಕಾರದ ನಿಯಮಾವಳಿ ಪ್ರಕಾರ ದಿನಭತ್ಯೆ ನೀಡಲಾಗುವುದು.

ಹೆಚ್ಚಿನ ವಿವರಗಳಿಗೆ ಕೃಷಿ ಇಲಾಖಾ ವೆಬ್‍ಸೈಟ್‍ http://raitamitra.kar.nic.in ಅಲ್ಲಿ ಮಾಹಿತಿ ಪಡೆಯಬಹುದು. ಅರ್ಜಿಗಳನ್ನು ವೆಬ್‍ಸೈಟ್ ನಿಂದ ಡೌನ್‍ಲೋಡ್ ಮಾಡಿಕೊಂಡು ಭರ್ತಿಮಾಡಿದ ಅರ್ಜಿಯನ್ನು ಆಗಸ್ಟ್ 11 ರ ಒಳಗಾಗಿ ಕರ್ನಾಟಕ ಕೃಷಿ ಬೆಲೆ ಆಯೋಗದ ಕಚೇರಿ, ಕೃಷಿ ಇಲಾಖಾ ಆವರಣ, ಶೇಷಾದ್ರಿ ರಸ್ತೆ, ಬೆಂಗಳೂರು ಇವರಿಗೆ ತಲುಪಿಸಬೇಕು. ಲಕೋಟೆಯ ಮೇಲೆ ಅರ್ಜಿ ಸಲ್ಲಿಸುವ ಹುದ್ದೆಯ ಹೆಸರನ್ನು ಕೆಂಪು ಶಾಯಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೃಷಿ ಬೆಲೆ ಆಯೋಗ ಕಚೇರಿಯ ದೂರವಾಣಿ : 080-22074118/22115496 ಮೂಲಕ ಸಂಪರ್ಕಿಸಬಹುದಾಗಿದೆ.

-ಎನ್.ಬಿ.

Leave a Reply

comments

Related Articles

error: