ಕರ್ನಾಟಕಪ್ರಮುಖ ಸುದ್ದಿ

ಕಳಪೆ ಗುಣಮಟ್ಟದ ಆಹಾರಧಾನ್ಯ ಮಾರಿದರೆ 1967 ಗೆ ದೂರು ನೀಡಿ

ಬೆಂಗಳೂರು, ಜುಲೈ 25 : ರಾಜ್ಯ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಸೋಮವಾರ ಕೆ.ಎಫ್.ಸಿ.ಎಸ್.ಸಿ. ಯಶವಂತಪುರ, ಬೆಂಗಳೂರು ಆಹಾರ ಧಾನ್ಯದ ಸಗಟು ಮಳಿಗಗೆ ಭೇಟಿ ನೀಡಿ ಆಹಾರ ಧಾನ್ಯದ ಗುಣಮಟ್ಟವನ್ನು ಪರಿಶೀಲನೆ ಮಾಡಿದರು. ಜಮೀರ್ ಅಹಮ್ಮದ್, ರಹಮತ್ ನಗರ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಆನ್‍ಲೈನ್‍ನಲ್ಲಿ ಪಾಸ್ ಯಂತ್ರದ ಮುಖಾಂತರ ಪಡಿತರ ಪದಾರ್ಥಗಳನ್ನು ವಿತರಿಸುವ ವ್ಯವಸ್ಥೆಯನ್ನು ಪರಿಶೀಲನೆ ಮಾಡಿದರು. ನಂತರ ಆಹಾರ ಇಲಾಖೆ ಆಯುಕ್ತರ ಕಚೇರಿಯಲ್ಲಿ ಆಯೋಗದ 2 ಸಭೆ ನಡೆಸಿದರು.

ಆಹಾರ ಇಲಾಖೆ, ಅಂಗನವಾಡಿ ಹಾಗೂ ಮಧ್ಯಾಹ್ನದ ಉಪಹಾರ ಯೋಜನೆಯಡಿಯಲ್ಲಿ ಪೂರೈಸುವ ಆಹಾರ ಧಾನ್ಯಗಳ ಸಂಬಂಧವಾಗಿ ಸಲಹೆಗಳು ಹಾಗೂ ದೂರುಗಳನ್ನು ಆಹಾರ ಆಯೋಗಕ್ಕೆ ಸಲ್ಲಿಸಲು ಆಹಾರ ಇಲಾಖೆಯ ನಿಯಂತ್ರಣ ಕೊಠಡಿಯ ಉಚಿತ ದೂರವಾಣಿ ಸಂಖ್ಯೆ -1967 ಕ್ಕೆ ಕರೆಮಾಡಲು ಸಾರ್ವಜನಿಕರಿಗೆ ತಿಳಿಸಿದೆ. ಆಹಾರ ಆಯೋಗದ ಇಮೇಲ್ ವಿಳಾಸ : [email protected]

-ಎನ್.ಬಿ.

 

Leave a Reply

comments

Related Articles

error: