ಮೈಸೂರು

ಸುನಿಲ್‍ ಬೋಸ್‍ ವಿಚಾರಣೆ ನ.18ಕ್ಕೆ

ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸುನಿಲ್ ಬೋಸ್‍ ಅವರ ವಿಚಾರಣೆಯನ್ನು ನವೆಂಬರ್‍ 18ಕ್ಕೆ ಮುಂದೂಡಲಾಗಿದೆ.

ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇಪ್ಪ ಅವರ ಪುತ್ರ ಸುನೀಲ್ ಬೋಸ್ ಗೆ  ಈಗಾಗಲೇ ಜಾಮೀನು ಸಿಕ್ಕಿದೆ.

ಮೈಸೂರು ನಗರ ನ್ಯಾಯಾಲಯವು ಅ.18ರಂದು ಕೋರ್ಟ್‍ಗೆ ವಿಚಾರಣೆಗೆ ಹಾಜರಾಗುವಂತೆ ಸುನಿಲ್‍ ಬೋಸ್‍ಗೆ ಸಮನ್ಸ್ ನೀಡಿತ್ತು.

2010ರಲ್ಲಿ ಭೂವಿಜ್ಞಾನ ಇಲಾಖೆ ಅಧಿಕಾರಿ ಅಲ್ಪೋಸಿಸ್ ಗೆ ಲಂಚ ಪಡೆಯಲು ಸಚಿವರ ಪುತ್ರ ಸುನೀಲ್ ಬೋಸ್ ಪ್ರೇರೇಪಿಸಿದ್ದರು ಎಂದು ಆರೋಪಿಸಲಾಗಿತ್ತು. ಪ್ರಕರಣ ಸಂಬಂಧ 2013ರಲ್ಲಿ ವಿಚಾರಣೆ ನಡೆಸಿ ಸುನೀಲ್ ಬೋಸ್ ಮತ್ತು ರಾಜು ಹೆಸರನ್ನು ಲೋಕಾಯುಕ್ತ ಪೋಲಿಸರು ಕೈ ಬಿಟ್ಟಿದ್ದರು. ನಂತರ ಮತ್ತೆ ಇಬ್ಬರನ್ನು ಆರೋಪಿಗಳಾಗಿ ಪರಿಗಣಿಸಬೇಕೆಂದು ದೂರುದಾರ ಬಸವರಾಜು ನ್ಯಾಯಲಯದ ಮೊರೆ ಹೋಗಿದ್ದರು. ಸೆ.7ರಂದು ಮೈಸೂರಿನ 3 ಜೆಎಂಎಫ್ ನ್ಯಾಯಾಲಯವು ಬಸವರಾಜು ಅವರ ಅರ್ಜಿಯನ್ನು ಪುರಸ್ಕರಿಸಿತ್ತು.

 

 

Leave a Reply

comments

Related Articles

error: