
ಮೈಸೂರು
ರಾಜ್ಯದ ರಾಜಕೀಯದ ತಿರುವು ನೀಡಲಿದೆ ಹುಣಸೂರು: ಜಿ.ಟಿ.ದೇವೇಗೌಡ
ಮೈಸೂರು,ಜು.25-ರಾಜ್ಯದ ರಾಜಕೀಯ ತಿರುವು ನೀಡುವುದೇ ಹುಣಸೂರು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಅಂದರೆ ಹುಣಸೂರಿನ ಜನ ವಿಶ್ವನಾಥ್ ಅವರಿಗೆ ಮತ ಹಾಕಿ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಹುಣಸೂರಿನ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಈ ಮಟ್ಟಕ್ಕೆ ಬರಲು ಕಾರಣ ಜೆಡಿಎಸ್. ದೇವರಾಜ ಅರಸ್ ಅವರನ್ನು ಸಾಯಿಸಿದ್ದು ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ಸೋಲಿಸಿದ್ದು ಇದೇ ಕಾಂಗ್ರೆಸ್ ಪಕ್ಷ. ಕರ್ನಾಟಕದಲ್ಲಿ ಖರ್ಗೆ, ಪರಮೇಶ್ವರ್ ಅವರನ್ನು ಮುಖ್ಯ ಮಂತ್ರಿ ಮಾಡೋಕೆ ಬಿಟ್ರಾ. ಉಪ ಮುಖ್ಯಮಂತ್ರಿ ಮಾಡಿ ಅಂತಾ ಕುಮಾರಸ್ವಾಮಿ ಬಳಿ ಕಣ್ಣಿರಾಕಿದರು ಎಂದರು.
ನಲವತ್ತು ವರ್ಷ ಕಾಂಗ್ರೆಸ್ ನಲ್ಲಿ ವಿಶ್ವನಾಥ್ ಬದುಕಿದರು. ನಾವು ಕುಸ್ತಿಗೆ ಸಿದ್ದರಾಮಯ್ಯ ಅವರನ್ನು ರೆಡಿ ಮಾಡಿದ್ವು ಆದ್ರೆ ವಿಶ್ವನಾಥ್ ಸಿದ್ದರಾಮಯ್ಯ ಅವ್ರನ್ನ ಜೆಡಿಎಸ್ ನಿಂದ ಕಾಂಗ್ರೆಸ್ ಕರೆಕೊಂಡು ಹೋಗಿ ಮುಖ್ಯಮಂತ್ರಿ ಮಾಡಿದ್ದರು. ಆದರೆ ಈಗ ವಿಶ್ವನಾಥ್ ಸ್ಥಿತಿ ಏನಾಯ್ತು? ಎಂದು ಪ್ರಶ್ನಿಸಿದ ಅವರು, ಮತ್ತೊಮ್ಮೆ ಹುಣಸೂರಿನಿಂದ ವಿಶ್ವನಾಥ್ ಅವರಿಗೆ ಜೆಡಿಎಸ್ ಪುನರ್ಜನ್ಮ ನೀಡುತ್ತದೆ ಎಂದು ಹೇಳಿದರು.
ಮಾಜಿ ಸಚಿವ ವಿಶ್ವನಾಥ್ ಅವರ ಪರವಾಗಿ ಜೈಕಾರ ಕೂಗಿದ ಜಿಟಿಡಿ ಅವರು ವಿಶ್ವನಾಥ್ ಅವರನ್ನು ಗೆಲ್ಲಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ನನ್ನ ಮಗನನ್ನು ಬೆಳೆಸುವುದಾಗಿ ಮಾಜಿ ಪ್ರಧಾನಿ ಹೇಳಿದ್ದಾರೆ. ವಿಶ್ವನಾಥ್ ಅವರನ್ನು ನೀವು ಗೆಲ್ಲಿಸಿ ಎಂದರು. (ವರದಿ-ಆರ್.ವಿ, ಎಂ.ಎನ್)