ಮೈಸೂರು

ಅ.22 ಮತ್ತು 23ರಂದು ರೋಟರಿ ಕ್ರೀಡಾಕೂಟ

ವಿಜಯನಗರದ ರೋಟರಿ ಸಂಸ್ಥೆಯಿಂದ ಅ.22 ಮತ್ತು 23ರಂದು ರೋಟರಿ ಸದಸ್ಯರಿಗೆ ಹಾಗೂ ಕುಟುಂಬದವರಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಸಂಘಟಕ ಹರೀಶ್ ಎಂ.ಎಸ್. ತಿಳಿಸಿದರು.

ಅವರು ಇಂದು(ಅ.18) ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಕ್ರೀಡಾಕೂಟಗಳನ್ನು ವಿಜಯನಗರದ ಮೂಡಾ ಮೈದಾನದಲ್ಲಿ ಆಯೋಜಿಸಿದ್ದು,  ನೇತೃತ್ವವನ್ನು ರೋಟರಿ ಸಹಾಯಕ ಗರ್ವನರ್ ಯಶಸ್ವಿ ಸೋಮಶೇಖರ, ಡಾ.ಜಯಂತ್ ಹಾಗೂ ರೋಟರಿ ವಿಜಯನಗರದ ಅಧ್ಯಕ್ಷ ರಾಘವೇಂದ್ರ ವೈ.ಎಸ್. ವಹಿಸುವರು. ಕ್ರೀಡಾಕೂಟದಲ್ಲಿ ಕ್ರಿಕೆಟ್, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್, ಚೆಸ್ ಹಾಗೂ ಕೇರಂ ಅನ್ನು ಆಯೋಜಿಸಲಾಗಿದೆ. ತಲಾ ನೂರು ರೂಪಾಯಿಗಳ ನೋಂದಣಿ ಶುಲ್ಕವನ್ನು ಸಂಗ್ರಹಿಸಲಾಗುತ್ತಿದ್ದು ಇದನ್ನು ಸಾಮಾಜಿಕ ಸೇವಾ ಕಾರ್ಯಕ್ರಮಗಳಗೆ ಸದ್ವಿನಿಯೋಗಗೊಳಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಚಂದ್ರಕುಮಾರ್, ರಾಮೇಗೌಡ, ಪದ್ಮನಾಭ, ಹಾಗೂ ಮಲ್ಲಿಕಾರ್ಜುನ್ ಬಳೆ ಹಾಜರಿದ್ದರು.

Leave a Reply

comments

Related Articles

error: