ಕರ್ನಾಟಕಪ್ರಮುಖ ಸುದ್ದಿ

ಮೂಲ ದಾಖಲೆಗಳ ಪರಿಶೀಲನೆ : ಕೆಪಿಎಸ್‍ಸಿಯಿಂದ ಅರ್ಹ ಅಭ್ಯರ್ಥಿಗಳು ಅರ್ಹತಾ ಪಟ್ಟಿ ಪ್ರಕಟ

ಬೆಂಗಳೂರು, ಜುಲೈ 26 : ಆಯೋಗದ ಅಧಿಸೂಚನೆ 2016 ರ ಅಕ್ಟೋಬರ್ 5 ರ ಸೇರ್ಪಡೆ ಅಧಿಸೂಚನೆ 2016ರ ಅಕ್ಟೋಬರ್ 22 ರ ಅಧಿಸೂಚಿಸಲಾಗಿರುವ ಈ ಕೆಳಕಂಡ ಹುದ್ದೆಗಳ 1:2 ಅನುಪಾತದಲ್ಲಿ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಜುಲೈ 21 ರಂದು ಆಯೋಗದ ವೆಬ್‍ಸೈಟ್ www.kpsc.kar.nic.in ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಿದೆ.

ಅಲ್ಪಸಂಖ್ಯಾತರ ನಿದೇಶನಾಲಯದಲ್ಲಿನ ಮೊರಾಜಿ ದೇಸಾಯಿ ವಸತಿ ಶಾಲೆಗಳಲ್ಲಿನ ಆಂಗ್ಲ ಬಾಷಾ ಶಿಕ್ಷಕರು – 41 (31+10 ಹೈ.ಕ.) ಹುದ್ದೆಗಳು, ಅಲ್ಪಸಂಖ್ಯಾತರ ನಿದೇಶನಾಲಯದಲ್ಲಿನ ಮೊರಾಜಿ ದೇಸಾಯಿ ವಸತಿ ಶಾಲೆಗಳಲ್ಲಿನ ಗಣಕಯಂತ್ರ ಶಿಕ್ಷಕರು – 24 (17+07 ಹೈ.ಕ.) ಹುದ್ದೆಗಳು. ಅಲ್ಪಸಂಖ್ಯಾತರ ನಿದೇಶನಾಲಯದಲ್ಲಿನ ಮೊರಾಜಿ ದೇಸಾಯಿ ವಸತಿ ಶಾಲೆಗಳಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರು  – 26 (18+ 08 ಹೈ.ಕ) ಹುದ್ದೆಗಳು, ಅಲ್ಪಸಂಖ್ಯಾತರ ನಿದೇಶನಾಲಯದಲ್ಲಿನ ಮೊರಾಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿನ ಪ್ರಥಮ ದರ್ಜೆ ಗಣಕ ಯಂತ್ರ ಸಹಾಯಕರು – 08 (06_02 ಹೈ.ಕ) ಹುದ್ದೆಗಳು, ಅಲ್ಪಸಂಖ್ಯಾತರ ನಿದೇಶನಾಲಯದಲ್ಲಿನ ಮೊರಾಜಿ ದೇಸಾಯಿ ವಸತಿ ಶಾಲೆಗಳಲ್ಲಿನ ಪ್ರಥಮ ದರ್ಜೆ ಗಣಕ ಯಂತ್ರ ಸಹಾಯಕರು  – 20 (13+7 ಹೈ.ಕ.  ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಗಣತಿದಾರರು ಕಂ ಡಾಟಾ ಎಂಟ್ರಿ ಆಪರೇಟರ್  – 55 (49+06 ಹೈ.ಕ.) ಹುದ್ದೆಗಳು, ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿನ ಗ್ರಂಥಾಲಯ ಸಹಾಯಕರು 35 (ಹೈ.ಕ.) ಹುದ್ದೆಗಳು, ಅಲ್ಪಸಂಖ್ಯಾತರ ನಿದೇಶನಾಲಯದಲ್ಲಿನ ಮೊರಾಜಿ ದೇಸಾಯಿ ವಸತಿ ಶಾಲೆಗಳಲ್ಲಿನ ಸಾಮಾನ್ಯ ವಿಜ್ಞಾನ ಶಿಕ್ಷಕರು  – 18 (11+7 ಹೈ.ಕ.) ಹುದ್ದೆಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿನ ವಿದ್ಯಾರ್ಥಿ ನಿಲಯಗಳಲ್ಲಿನ ವಾರ್ಡನ್ (ಬಾಲಕ/ಬಾಲಕಿ) 443 (296+147 ಹೈ.ಕ.) ಹುದ್ದೆಗಳು.

-ಎನ್.ಬಿ.

Leave a Reply

comments

Related Articles

error: