ಸುದ್ದಿ ಸಂಕ್ಷಿಪ್ತ

ಆ.15: ಶ್ರೀಕೃಷ್ಣಜಯಂತಿ ಉತ್ಸವ ಸಂಗೀತ ಸ್ಪರ್ಧೆಗಳು

ಮೈಸೂರು,ಜು.26:- ಗಾನಭಾರತಿಯ ಶ್ರೀಕೃಷ್ಣ ಜಯಂತಿ-2017  ಉತ್ಸವದ ಅಂಗವಾಗಿ ಆ.15ರಂದು ಮಧ್ಯಾಹ್ನ 2 ಗಂಟೆಗೆ ಮೈಸೂರಿನ ಕುವೆಂಪುನಗರದಲ್ಲಿರುವ ವೀಣೆ ಶೇಷಣ್ಣ ಭವನದಲ್ಲಿ ಸಂಗೀತ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ವಿದ್ವತ್ ಅಥವಾ ಅದಕ್ಕೆ ಸಮಾನವಾದ ಸಂಗೀತ ಪರೀಕ್ಷೆಯನ್ನು ಮುಗಿಸದಿರುವ, ಕರ್ನಾಟಕ ರಾಜ್ಯದ ಹವ್ಯಾಸಿ ಯುವ ಕಲಾವಿದರು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಕರ್ನಾಟಕ ಶಾಸ್ತ್ರೀಯ ಸಂಗೀತ, ಕರ್ನಾಟಕ ವಾದ್ಯ ಸಂಗೀತ, ದಾಸರ ರಚನೆಗಳು, ಲಯವಾದ್ಯ, ವಚನ ಗಾಯನ, ಮಂಕುತಿಮ್ಮನ ಕಗ್ಗ ಗಾಯನ ಮತ್ತು ಸಂಗೀತಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ ಏಳು ವಿಭಾಗಗಳಲ್ಲಿ,   ಕಿರಿಯರ (8-15 ವರ್ಷ) ಮತ್ತು ಹಿರಿಯರ (15-25 ವರ್ಷ) ವರ್ಗಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಅಧಿಕೃತ ಅರ್ಜಿಯ ನಮೂನೆಗಳನ್ನು  ಗಾನಭಾರತಿಯ ಕಚೇರಿಯಿಂದ ಸಂಜೆ  5ರಿಂದ 7 ಗಂಟೆಗೆ, ಜು.28 ರಿಂದ ಆ. 7ವರೆಗೆ ಪಡೆದುಕೊಳ್ಳಬಹುದು. ಸ್ಪರ್ಧೆಯ ಪ್ರವೇಶ ಶುಲ್ಕ, ಪ್ರತಿ ವಿಭಾಗಕ್ಕೂ  ರೂ. 30 ಇದ್ದು, ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ ಆ.8 ಆಗಿದೆ.  ಅನಂತರ ಯಾವುದೇ ಕಾರಣಕ್ಕೆ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ (0821) 2560313, 98861-89917, 97408-99496 ಸಂಪರ್ಕಿಸಬಹುದು. (ಎಸ್.ಎಚ್)

 

Leave a Reply

comments

Related Articles

error: