ಮೈಸೂರು

ಅಧಿಕಾರಿಗಳ ಅಮಾನತಿಗೆ ಹಿರಿಯ ನಾಗರಿಕರ ಒತ್ತಾಯ

ಹಿರಿಯ ನಾಗರಿಕರ ಸಕಾಲ ಸೇವಾ ಕೇಂದ್ರದ ಹಿರಿಯ ನಾಗರಿಕರುಗಳು ವಿಶ್ವ ಹಿರಿಯನಾಗರಿಕರ ದಿನಾಚರಣೆಯಂಗವಾಗಿ ನಡೆದ ದಸರಾ ಕ್ರೀಡಾಕೂಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಕೆ.ರಾಧಾ ಹಾಗೂ ವಿಕಲಚೇತನ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಹೆಚ್.ಆರ್.ಶ್ರೀನಿವಾಸ ಇವರು ಅಧಿಕಾರ ದುರುಪಯೋಗ ಪಡಿಸಿಕೊಂಡು ಹಿರಿಯ ನಾಗರಿಕರಿಗೆ ವಂಚಿಸಿದ್ದು ಅವರನ್ನು ಅಧಿಕಾರದಿಂದ ಅಮಾನತುಗೊಳಿಸಬೇಕೆಂದು ಹಿರಿಯ ನಾಗರಿಕರ ಸಕಾಲ ಸೇವಾ ಕೇಂದ್ರದ ಜಿಲ್ಲಾ ಗೌರವಾಧ್ಯಕ್ಷ ಡಾ.ಜೆ.ಜಗನ್ನಾಥ್ ಸಿಂಗ್, ಜಿಲ್ಲಾಧ್ಯಕ್ಷೆ ಲಲಿತಾ ಶರ್ಮ, ಪ್ರಧಾನ ಕಾರ್ಯದರ್ಶಿ ಬಿ.ಆರ್.ಉಮಾಕಾಂತ್, ಕೆ.ಎಸ್.ಸೀತಮ್ಮ, ಪಾರ್ವತಮ್ಮ, ಸುಧಾ ಪಿ.ಪಡಿಯಾರ್, ನಾಗರಾಜು ಎನ್,ಸಿ, ಚಾಮಶೆಟ್ಟಿ ಎಮ್.ವಿ, ಅಂಕೇಗೌಡ, ಪದ್ಮ ಪಾರ್ಥಸಾರಥಿ, ನಾಗರಾಜು, ಬಿ.ವಿ.ಪ್ರೇಮ ಅವರು ಜಿಲ್ಲಾ ದಂಡಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.

Leave a Reply

comments

Related Articles

error: