ಮೈಸೂರು

ಜು.28ಕ್ಕೆ ಡೆಂಗ್ಯೂ ಜನ ಜಾಗೃತಿ

ಮೈಸೂರು,ಜು.26 : ಸ್ವಚ್ಚ ಕರ್ನಾಟಕ ಆರೋಗ್ಯ ಕರ್ನಾಟಕ ಸಂಸ್ಥೆಯಿಂದ ಡೆಂಗ್ಯೂ ನಿರ್ಮೂಲನೆ ಕುರಿತು ಪ್ರಾತ್ಯಕ್ಷಿಕೆ ಹಾಗೂ ಜನ ಜಾಗೃತಿ ಕಾರ್ಯಕ್ರಮವನ್ನು ಜು.28ರ ಬೆಳಗ್ಗೆ 9ಕ್ಕೆ ಕುವೆಂಪುನಗರದ ಗಂಡಬೇರುಂಡ ಉದ್ಯಾನವನದಲ್ಲಿ ಆಯೋಜಿಸಲಾಗಿದೆ.

ಶಾಸಕ ಎಂ.ಕೆ.ಸೋಮಶೇಖರ್, ಮಹಾಪೌರ ಎಂ.ಜೆ.ರವಿಕುಮಾರ್, ಜಿಲ್ಲಾಧಿಕಾರಿ ಡಿ.ರಂದೀಪ್, ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್, ಪಾಲಿಕೆ ಆಯುಕ್ತ ಜಗದೀಶ್, ಜಿಲ್ಲಾರೋಗ್ಯಾಧಿಕಾರಿ ಡಾ.ಬಸವರಾಜು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಚಾಲನೆ ನೀಡುವರು.

ಪಾಲಿಕೆ ಸದಸ್ಯ ಸ್ನೇಕ್ ಶ್ಯಾಂ, ಜಿಶಸಾಪ ಅಧ್ಯಕ್ಷ ಎಂ.ಚಂದ್ರಶೇಖರ್, ಸಂಸ್ಥೆ ಸಂಸ್ಥಾಪಕ ಡಾ.ವಿ.ಎಸ್.ಸೋಮಶೇಖರ್ ಗೌಡ, ಬಿ.ಎಂ.ರಾಮಚಂದ್ರ ಹಾಜರಿರುವರು. (ಕೆ.ಎಂ.ಆರ್)

Leave a Reply

comments

Related Articles

error: