ದೇಶಪ್ರಮುಖ ಸುದ್ದಿ

ಕಪಿಲ್ ಶೋ ಬಿಟ್ಟ ನಂತರ ಭಾರೀ ಏರಿಕೆಯಾದ ಸುನಿಲ್ ಗ್ರೋವರ್ ಸಂಭಾವನೆ

ಮುಂಬೈ, ಜುಲೈ 26 : ಕಪಿಲ್ ಶರ್ಮಾ ಶೋನಲ್ಲಿ ಕಿತ್ತಾಟದ ನಂತರ ಶೋ ತೊರೆದಿದ್ದ ಕಾಮಿಡಿಯನ್ ಸುನಿಲ್ ಗ್ರೋವರ್‍ಗೆ ಒಳ್ಳೆಯದೇ ಆಗಿದೆ. ಒಂದು ಕಡೆ ಕಪಿಲ್ ಶರ್ಮಾ ಜನಪ್ರಿಯತೆ, ಶೋ ಟಿಆರ್‍ಪಿ ಕುಸಿಯತೊಡಗಿದರೆ ಮತ್ತೊಂದು ಕಡೆ ಸುನೀಲ್ ಗ್ರೋವರ್ ಜನಪ್ರಿಯತೆ ಮತ್ತು ಸಂಭಾವನೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಕಪಿಲ್ ಶರ್ಮಾ ಶೋ ಬಿಡುವ ಮುನ್ನ ಸುನಿಲ್ ಗ್ರೋವರ್ ಒಂದು ಎಪಿಸೋಡ್ ಗೆ 7-8 ಲಕ್ಷ ರೂಪಾಯಿ ಪಡೆಯುತ್ತಿದ್ರು. ಈಗ ಗೆಸ್ಟ್ ಅಪಿಯರೆನ್ಸ್‍ಗೇ 13-14 ಲಕ್ಷ ರೂಪಾಯಿ ಪಡೆಯುತ್ತಿದ್ದಾರೆ. ಇದರ ಜೊತೆಗೆ ಸೋನಿ ಟಿವಿಯಲ್ಲೇ ಕಪಿಲ್ ಎದುರಾಳಿ ಕೃಷ್ಣಾ ಅಭಿಷೇಕ್ ಅವರು ಕಾಮಿಡಿ ಕಂಪನಿ ಎನ್ನುವ ನಗೆ ಕಾರ್ಯಕ್ರಮ ಆರಂಭಿಸಿದ್ದಾರೆ. ಈ ಶೋನಲ್ಲಿ ಸುನಿಲ್ ಗ್ರೋವರ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಕಪಿಲ್ ಶರ್ಮಾ ಜೊತೆಗೆ ಜಗಳವಾದ ನಂತರ ಯಾವುದೇ ಶೋನಲ್ಲಿ ಖಾಯಂ ನಟನಾಗಿ ಪಾಲ್ಗೊಳ್ಳದೇ ಇರಲು ಗ್ರೋವರ್ ನಿರ್ಧರಿಸಿದ್ದು, ಇದರಿಂದ ಅವರ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಈ ಸುದ್ದಿ ಕೇಳಿಸಿಕೊಳ್ಳುತ್ತಿರುವ ಕಪಿಲ್ ಶರ್ಮಾ ಮಾತ್ರ ಪೆಚ್ಚಾಗುವುದು ಗ್ಯಾರಂಟಿ ಎಂದು ಬಿ-ಟೌನ್ ಮಂದಿ ಮಾತಾಡುತ್ತಿದ್ದಾರಂತೆ.

-ಎನ್.ಬಿ.

Leave a Reply

comments

Related Articles

error: