ಸುದ್ದಿ ಸಂಕ್ಷಿಪ್ತ

ಅರಮನೆ ಪಾವಿತ್ರ್ಯಕ್ಕೆ ಧಕ್ಕೆ ತಂದಿರುವ ಬಗ್ಗೆ ಬೇಸರ

ಮೈಸೂರು ಶಾಪಿಂಗ್ ಫೆಸ್ಟಿವಲ್ ಆಯೋಜಕರು ಮೈಸೂರು ಅರಮನೆ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ ಬಾಲಿವುಡ್ ತಾರೆ ಜೋದಿತಸಿಂಗ್ ಅವರಿಂದ ಅರೆಬಟ್ಟೆ ತೊಟ್ಟು ಗಾಯನ ಕಾರ್ಯಕ್ರಮ ನಡೆಸಿ ಅರಮನೆಯ ಪಾವಿತ್ರ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಅರಮನೆ ಉಳಿಸಿ ಹೋರಾಟ ಸಮಿತಿಯು ಬೇಸರ ವ್ಯಕ್ತಪಡಿಸಿದೆ.

ಕೂಡಲೇ ಮೈಸೂರು ಶಾಪಿಂಗ್ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಕೊಟ್ಟಿರುವ ಅನುಮತಿಯನ್ನು ವಾಪಸ್ಸು ಪಡೆಯದಿದ್ದಲ್ಲಿ ಮಹಾರಾಜರ ಅಭಿಮಾನಿಗಳು ಮತ್ತು ಸಂಘಸಂಸ್ಥೆಗಳು ಒಟ್ಟುಗೂಡಿ ಹೋರಾಟ ಮಾಡಬೇಕಾದ ಸನ್ನಿವೇಶಗಳು ಬರುತ್ತವೆ ಎಂದು ಹೇಳಿದೆ.

Leave a Reply

comments

Related Articles

error: