ಸುದ್ದಿ ಸಂಕ್ಷಿಪ್ತ

ಆ.01 ರಿಂದ ಪಿಂಚಣಿ ಅದಾಲತ್

ಮಡಿಕೇರಿ ಜು.26: ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ತಾಲ್ಲೂಕಿಗೆ ಸಂಬಂಧಿಸಿದ ಹೋಬಳಿಗಳಲ್ಲಿ ಆಗಸ್ಟ್ ಮಾಹೆಯಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ.

ಆಗಸ್ಟ್, 01 ರಂದು ಮಧ್ಯಾಹ್ನ 12.30 ಗಂಟೆಗೆ ಸಂಪಾಜೆ,  ಆಗಸ್ಟ್, 02 ರಂದು ಬೆಳಗ್ಗೆ 10.30 ಗಂಟೆಗೆ ಅಮ್ಮತ್ತಿ, ಬೆಳಗ್ಗೆ 11 ಗಂಟೆಗೆ ಪೊನ್ನಂಪೇಟೆ, ಬೆಳಗ್ಗೆ 11.30 ಗಂಟೆಗೆ ಬಾಳೆಲೆ, ಮಧ್ಯಾಹ್ನ 12.30 ಗಂಟೆಗೆ ಶ್ರೀಮಂಗಲ, ಮಧ್ಯಾಹ್ನ 1 ಗಂಟೆಗೆ ಹುದಿಕೇರಿ, ಮಧ್ಯಾಹ್ನ 2.30 ಗಂಟೆಗೆ ವಿರಾಜಪೇಟೆ, ಆಗಸ್ಟ್, 03 ರಂದು ಮಧ್ಯಾಹ್ನ 12.30 ಗಂಟೆಗೆ ಸುಂಟಿಕೊಪ್ಪ, ಮಧ್ಯಾಹ್ನ 1 ಗಂಟೆಗೆ ಕುಶಾಲನಗರ, ಆಗಸ್ಟ್, 04 ರಂದು ಮಧ್ಯಾಹ್ನ 12 ಗಂಟೆಗೆ ಮಡಿಕೇರಿ, ಆಗಸ್ಟ್, 05 ರಂದು ಮಧ್ಯಾಹ್ನ 12 ಗಂಟೆಗೆ ನಾಪೋಕ್ಲು, ಮಧ್ಯಾಹ್ನ 1 ಗಂಟೆಗೆ ಭಾಗಮಂಡಲ, ಆಗಸ್ಟ್, 07 ರಂದು ಬೆಳಗ್ಗೆ 11 ಗಂಟೆಗೆ ಶಾಂತಳ್ಳಿ, ಬೆಳಗ್ಗೆ 11.30 ಗಂಟೆಗೆ ಸೋಮವಾರಪೇಟೆ, ಮಧ್ಯಾಹ್ನ 12.30 ಗಂಟೆಗೆ ಶನಿವಾರಸಂತೆ, ಮಧ್ಯಾಹ್ನ 1 ಗಂಟೆಗೆ ಕೊಡ್ಲಿಪೇಟೆ ಇಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ ಎಂದು ಮಡಿಕೇರಿ ಉಪ ವಿಭಾಗದ ಉಪ ವಿಭಾಗಾಧಿಕಾರಿ ಅವರು ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: