ಮೈಸೂರು

ಜೋಳ ತುಂಬಿದ ಲಾರಿಗೆ ಬೆಂಕಿ : ಲಕ್ಷಾಂತರ ರೂ.ಜೋಳ ಬೆಂಕಿಗಾಹುತಿ

ಮೈಸೂರು,ಜು.26:-ಜೋಳ ತುಂಬಿದ ಲಾರಿಗೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ ಮೌಲ್ಯದ ಜೋಳ ಬೆಂಕಿಗಾಹುತಿ  ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದ ಬಳಿ ನಡೆದಿದೆ.

ಲಾರಿಯಲ್ಲಿ  ಮಂಜುನಾಥ್ ಮತ್ತು ಜಗದೀಶ್ ಎಂಬುವರಿಗೆ ಸೇರಿದ ಜೋಳವಾಗಿದ್ದು, ಸುಮಾರು 8 ಲಕ್ಷ ರೂ ಮೌಲ್ಯದ ಜೋಳ ಬೆಂಕಿಗಾಹುತಿಯಾಗಿದ್ದು,  ರೈತರು ಕಂಗಾಲಾಗಿದ್ದಾರೆ. ಆಕಸ್ಮಿಕವಾಗಿ ಲಾರಿಗೆ ಬೆಂಕಿ ಹೊತ್ತಿಕೊಂಡಿದ್ದು,  ಲಾರಿ ಸಂಪೂರ್ಣ ಭಸ್ಮವಾಗಿದೆ. ಕವಲಂದೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: