ಮೈಸೂರು

ಶ್ರೀ ಚಿಕ್ಕದೇವಮ್ಮ ಬೆಟ್ಟದ ದೇವಸ್ಥಾನದಲ್ಲಿ ಕಳ್ಳತನ

ಮೈಸೂರು,ಜು.27:- ಹೆಚ್.ಡಿ.ಕೋಟೆ ತಾಲೂಕಿನ  ಚಿಕ್ಕದೇವಮ್ಮ ಬೆಟ್ಟದ  ಪ್ರಸಿದ್ದ ದೇವತೆ ಶ್ರೀ ಚಿಕ್ಕದೇವಮ್ಮ ಬೆಟ್ಟದ ದೇವಸ್ಥಾನದಲ್ಲಿ ಕಳ್ಳತನವಾಗಿದೆ.

ಕಳ್ಳರು ಹಾರೆಯಿಂದ ಬಾಗಿಲು ಮೀಟಿ ದೇವಾಲಯದ ಹುಂಡಿ ಕದ್ದೊಯ್ದಿದ್ದಾರೆ. ಕಳುವಿನ ಚಿತ್ರ ಸಂಗ್ರಹಿಸಿದ್ದ ಸಿ.ಸಿ ಕ್ಯಾಮರಾ ದಾಖಲಾತಿಯನ್ನೂ ಕಳ್ಳರು  ಹೊತ್ತೊಯ್ದಿದ್ದಾರೆ.  ಸ್ಥಳಕ್ಕೆ ಪೊಲೀಸರ ದೌಡಾಯಿಸಿದ್ದು, ಬೆರಳಚ್ಚು ತಜ್ಞರು ಶ್ವಾನದಳದ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದೆ. ಸರಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಆರ್.ವಿ,ಎಸ್.ಎಚ್)

Leave a Reply

comments

Related Articles

error: