ಕರ್ನಾಟಕಪ್ರಮುಖ ಸುದ್ದಿ

ಮನೆಯವರು ನಿದ್ದೆಯಲ್ಲಿರುವಾಗಲೇ ಕಳ್ಳರ ಕೈಚಳಕ : 100ಗ್ರಾಂ ಚಿನ್ನ ಕಳುವು

ರಾಜ್ಯ(ಮಂಡ್ಯ)ಜು.27:- ಮನೆಯ ಬಾಗಿಲು ಮುರಿದು ಕಳ್ಳತನ  ನಡೆಸಿದ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಹೆತ್ತಗೋನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೆತ್ತಗೋನಹಳ್ಳಿ ಗ್ರಾಮದ  ಕುಮಾರ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಬೀರುವಿನಲ್ಲಿ ಇಟ್ಟಿದ್ದ 100 ಗ್ರಾಂ ಚಿನ್ನದ ಆಭರಣ ಮತ್ತು 10 ಸಾವಿರ ನಗದನ್ನು ಕಳ್ಳರು ಕದ್ದೋಯ್ದಿದ್ದಾರೆ. ಚಾಲಾಕಿ ಕಳ್ಳರು ಮನೆಯಲ್ಲಿ  ಎಲ್ಲರೂ ಮಲಗಿದ್ದಾಲೆ  ತಮ್ಮ ಕೈಚಳಕ ತೋರಿಸಿದ್ದಾರೆ. ಸ್ಥಳಕ್ಕೆ  ಕೆ.ಆರ್.ಪೇಟೆ ಪೊಲೀಸರು ಭೇಟಿ ನೀಡಿದ್ದು, ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆದಿದೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: