
ಕರ್ನಾಟಕಪ್ರಮುಖ ಸುದ್ದಿ
ರಾಜ್ಯದಲ್ಲಿ ಬಿಜೆಪಿಯನ್ನು ಮೂಲೆಗುಂಪು ಮಾಡಲಾಗುವುದು : ಸಿಎಂ ಸಿದ್ದರಾಮಯ್ಯ
ರಾಜ್ಯ(ಹುಬ್ಬಳ್ಳಿ)ಜು.27:- ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶಕುಮಾರ, ಲಾಲು ಪ್ರಸಾದ್ ಕಿತ್ತಾಟ ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇಬ್ಬರ ಪಕ್ಷಗಳ ಒಕ್ಕೂಟಕ್ಕೆ ಜನ ಆಶೀರ್ವಾದ ಮಾಡಿದ್ದಾರೆ. ಈಗ ಒಕ್ಕೂಟದಿಂದ ಹೊರ ಹೋಗುವುದು ಒಳ್ಳೆಯದಲ್ಲ, ಒಂದಾಗಿ ಉಳಿಯಲು ಯತ್ನವಾಗಬೇಕು, ಕರ್ನಾಟಕದಲ್ಲಿ ಕಾಂಗ್ರೆಸ ಸಮರ್ಥವಾಗಿದೆ. ಯಾವುದೇ ಒಕ್ಕೂಟದ ಅವಶ್ಯಕತೆ ಇಲ್ಲ, ರಾಜ್ಯದಲ್ಲಿ ಬಿಜೆಪಿಯನ್ನು ಮೂಲೆಗುಂಪು ಮಾಡಲಾಗುವುದು. ರಾಜ್ಯದಿಂದಲೇ ಬಿಜೆಪಿ ಸರ್ವನಾಶಕ್ಕೆ ನಾಂದಿಯಾಗಲಿದೆ ಎಂದರು. ಲಿಂಗಾಯತ ಸ್ವತಂತ್ರ ಧರ್ಮ ವಿಚಾರದಲ್ಲಿ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ, ಅವರಲ್ಲಿ ಗುಂಪುಗಳಿವೆ, ಮೊದಲು ಅವರೆಲ್ಲ ಒಂದಾಗಿ ಮನವಿ ಕೊಡಲಿ,ನಂತರ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗವುದು,ಕಾನೂನು ಇಲಾಖೆ ಸಲಹೆ ಪಡೆದ ನಂತರ ಸರ್ಕಾರದ ಕ್ರಮದ ನಿರ್ಧಾರ ಎಂದರು.
ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ಅಭಿವೃದ್ದಿಗೆ ಅನುದಾನದ ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಉತ್ತರ ನೀಡದೆ ತೆರಳಿದರು. (ಕೆ.ಎಸ್,ಎಸ್.ಎಚ್)