ಸುದ್ದಿ ಸಂಕ್ಷಿಪ್ತ

ವಿಷ ಸೇವಿಸಿ ಆತ್ಮಹತ್ಯೆ

ಜೀವನದಲ್ಲಿ ಜಿಗುಪ್ಸೆಗೊಂಡ ಕೆ.ಆರ್.ನಗರ ತಾಲೂಕಿನ ದೊಡ್ಡೆಕೊಪ್ಪಲು ನಿವಾಸಿ ಶಾಂತಕುಮಾರ್(21) ಆತ್ಮಹತ್ಯೆಗೆ ಶರಣಾಗಿದ್ದಾರೆ. ಈತ ಹುಣಸೂರು ತಾಲೂಕು ಬಿಳಿಕೆರೆಯ ಕರಿನಾಯ್ಕ್ ಅವರ ಮಗನಾಗಿದ್ದು ಸ್ಕೂಟರ್ ರಿಪೇರಿ ಕೆಲಸ ಮಾಡಿಕೊಂಡಿದ್ದರು. ಶಾಂತಕುಮಾರ್ ಗೆ ಮೂರ್ಚೆ ರೋಗವಿತ್ತು ಇದರಿಂದ ಬೇಸತ್ತು ಮೆಕ್ಯಾನಿಕ ಅಂಗಡಿಯಲ್ಲಿಯೇ ಶನಿವಾರದಂದು ವಿಷ ಸೇವಿಸಿ ಅಸ್ವಸ್ಥನಾಗಿದ್ದ ಈತನನ್ನು ಕೆ.ಆರ್.ನಗರ ಸಾರ್ವಜನಿಕ  ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಕೊನೆಯುಸಿರೆಳೆದಿದ್ದಾನೆ. ಪ್ರಕರಣವನ್ನು ಕೆ.ಆರ್.ನಗರ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದಾರೆ.

Leave a Reply

comments

Related Articles

error: