ಮೈಸೂರು

ವ್ಯಾನ್ ಕಿಟಕಿ ಗಾಜು ಒಡೆದು ಚಿನ್ನಾಭರಣ, ನಗದು ಕಳವು

ಮಾರುತಿ ಓಮ್ನಿ ವ್ಯಾನ್ ನ ಕಿಟಕಿ ಗಾಜು ಒಡೆದು ವ್ಯಾನಿಟಿ ಬ್ಯಾಗಿನಲ್ಲಿದ್ದ ಹಣ ಮತ್ತು ಒಡವೆಯನ್ನು ಕಳ್ಳರು ಅಪಹರಿಸಿದ್ದಾರೆ.

ಬೆಂಗಳೂರು ನಿವಾಸಿಯಾದ ಮಹೇಶ್ ಹಾಗೂ ಕುಟುಂಬದವರು ಮೈಸೂರು ದಸರಾ ವಸ್ತು ಪ್ರದರ್ಶನವನ್ನು ವೀಕ್ಷಿಸಲು ಅ.16ರಂದು ಮಾರುತಿ ವ್ಯಾನ್ (ಕೆಎ02, ಎನ್ 968)ರಲ್ಲಿ ಆಗಮಿಸಿದ್ದರು, ಸಂಜೆ 4:30ರ ಸುಮಾರಿಗೆ ಇಟ್ಟಿಗೆಗೂಡಿನ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಸ್ನೇಹಿತನ ಮನೆಯ ಮುಂಭಾಗದಲ್ಲಿ ನಿಲ್ಲಿಸಿ ವಸ್ತು ಪ್ರದರ್ಶನಕ್ಕೆ ಹೋಗಿದ್ದಾರೆ. ರಾತ್ರಿ ವಾಪಸ್ಸು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯು ನಗರದ ಇಟ್ಟಿಗೆಗೂಡಿನ ವ್ಯಾಪ್ತಿಯಲ್ಲಿ ನಡೆದಿದ್ದು ವ್ಯಾನಿಟಿ ಬ್ಯಾಗಿನಲ್ಲಿದ್ದ 10 ಸಾವಿರ ನಗದು, 26 ಗ್ರಾಂ ತೂಕದ ಚಿನ್ನದ ಚೈನ್ ಮತ್ತು ಉಂಗುರ ಕಳ್ಳರು ಕದಿದ್ದಾರೆ ಎಂದು ಮಹೇಶ್ ನಜರ್ ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಚಿನ್ನ ಕಳವು: ಮಹದೇವಪುರದ ‘ಸಿ’ ಬ್ಲಾಕ್ ನ ನಿವಾಸಿಯಾದ ಚಂದ್ರಶೇಖರ್ ಅವರು ಮನೆಯಲ್ಲಿ ಕಳ್ಳತನ ನಡೆದಿದೆ. ಅವರು ಊರಿನಲ್ಲಿ ಇಲ್ಲದ ಸಮಯದಲ್ಲಿ ಕಳ್ಳತನ ನಡೆದಿದ್ದು. ಕಳ್ಳರು ಮನೆ ಬಾಗಿಲು ಮುರಿದು ಬೀರುವಿನ ಲಾಕರ್ ನಲ್ಲಿದ್ದ ಸುಮಾರು 16 ಗ್ರಾಂ ಚಿನ್ನ ಹಾಗೂ ಬೆಳ್ಳಿ ಸಾಮಾನುಗಳನ್ನು ಕಳವು ಮಾಡಿದ್ದಾರೆ.
ಚಂದ್ರಶೇಖರ್ ಹಾಗೂ ಕುಟುಂಬದವರು ಕಳೆದ ಸೋಮವಾರ ಮನೆಗೆ ಬೀಗ ಹಾಕಿ ಚನ್ನರಾಯಪಟ್ಟಣಕ್ಕೆ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಶುಕ್ರವಾರ ಹಿಂತಿರುಗಿ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾರಣ್ಯಪುರಂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Leave a Reply

comments

Related Articles

error: