ಕರ್ನಾಟಕ

ಮಾರ್ಚ್ 2017ರವರೆಗೆ ಬಡ್ಡಿ ಮನ್ನಾ ಸೌಲಭ್ಯ ವಿಸ್ತರಣೆ

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಸೌಲಭ್ಯವನ್ನು ಮಾರ್ಚ್ 2017ರವರೆಗೆ ವಿಸ್ತರಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ರೈತರಿಗೆ ಸಹಕಾರ ಸಂಘಗಳ ಮೂಲಕ ಸಾಲ ಸಿಗುವಂತಾಗಲು 5 ಕೋಟಿ ರು. ಅನ್ನು ಅಪೆಕ್ಸ್ ಬ್ಯಾಂಕ್‍ನಲ್ಲಿ ಠೇವಣಿ ಇಡಲು ಕೂಡ ನಿರ್ಧರಿಸಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಪತ್ರಿಕಾಗೋಷ್ಠಿ ನಡೆಸಿಈ ಬಗ್ಗೆ ಮಾಹಿತಿ ನೀಡಿದರು.

ಸಹಕಾರ ಸಂಘಗಳಿಂದ ಸಾಲ ಪಡೆದು ಮರುಪಾವತಿ ಮಾಡದ ರೈತರು ಅಸಲು ಪಾವತಿಸಿದರೆ ಬಡ್ಡಿ ಸಾಲ ಮನ್ನಾ ಮಾಡುವ ಯೋಜನೆ ಪ್ರಕಟಿಸಲಾಗಿತ್ತು. ಆದರೆ, ಕಳೆದ ಸೆಪ್ಟೆಂಬರ್‍ಗೆ ಈ ಸೌಲಭ್ಯದ ಅವಧಿ ಮುಗಿದಿದೆ. ಈಗ ಮತ್ತೆ ಬರಗಾಲ, ಬೆಳೆನಷ್ಟದಿಂದ ರೈತರು ತತ್ತರಿಸಿರುವ ಕಾರಣ ಮುಂದಿನ ಬಡ್ಡಿ ಮನ್ನಾವನ್ನು ಮಾರ್ಚ್ ಅಂತ್ಯದವರೆಗೆ ವಿಸ್ತರಿಸಲಾಗಿದೆ.

ರೈತರು ಆರ್ಥಿಕ ಸಂಕಷ್ಟದಲ್ಲಿರುವುದರಿಂದ, ಸಾಲ ವಸೂಲು ಮಾಡಲು ಒತ್ತಾಯ ಮಾಡಬಾರದು. ಹಾಗೇನಾದರೂ ಮಾಡಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Leave a Reply

comments

Related Articles

error: