ಮೈಸೂರು

ಜು.28 ರೇರಾ ಕಾರ್ಯಾಗಾರ

ಮೈಸೂರು,ಜು.27 : ಕೋರ್ ಕಮಿಟಿ ನರೆಡ್ಕೊ ಮೈಸೂರು ವತಿಯಿಂದ RERA ಕಾಯ್ದೆ ಬಗ್ಗೆ ಕಾರ್ಯಗಾರವನ್ನು ಏರ್ಪಡಿಸಲಾಗಿದೆ ಎಂದು ಕಮಿಟಿ ಅಧ್ಯಕ್ಷ ಟಿ.ಜಿ.ಅದಿಶೇಷನ್ ಗೌಡ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜುಲೈ 28 ರಂದು ನಗರದ ಹೋಟೆಲ್ ವಿಲ್ಲಾ ಪಾರ್ಕ್ ನಲ್ಲಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಆಂದೋಲನ ದಿನ ಪತ್ರಿಕೆಯ ಸಂಪಾದಕರಾದ ರಾಜಶೇಖರ್ ಕೋಟಿ ರವರು ಉದ್ಘಾಟಿಸಲಿದ್ದಾರೆ.ಈ ಕಾರ್ಯಗಾರದಲ್ಲಿ ವಕೀಲರಾದ ಧಿರೇಂದ್ರಕುಮಾರ್ ಆರ್ ಮೆಹ್ತಾ, ಪ್ರಕಾಶ್ ಕಾಳಪ್ಪ,ಉದ್ಯಮಿ ದೀಪಕ್ ಲೂಲಾ, ಅರುಣ್ ಕುಮಾರ್ ಇವರು ಕಾರ್ಯಗಾರದಲ್ಲಿ ಚರ್ಚಿಸಲಿದ್ದಾರೆ.ನಂತರ ಚರ್ಚಿಸಿ ಅದರ ಒಳನೋಟವನ್ನು ನೀಡಲಿದ್ದಾರೆ. ತಂದನಂತರ ಇದರ ಬಗ್ಗೆ ಪ್ರಶ್ನೋತ್ತರ ಅಧಿವೇಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉಲ್ಲಾಸ್ ಶಂಕರ್, ನಾಗೇಶ್ ಅಥರ್ವಾ, ನೂರ್ ಅಹ್ಮದ್ ಸೇರಿದಂತೆ ಮತ್ತಿತರರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: